ಪುರಸಭೆ ಮುಖ್ಯಾಧಿಕಾರಿ ಹಲ್ಲೆ

ಪುರಸಭೆ ಮುಖ್ಯಾಧಿಕಾರಿ ಹಲ್ಲೆ

ಸಿಂದಗಿ, ಏ. 04: ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮೇಲೆ ಇಂದು ಮಧ್ಯಾಹ್ನ ಪುರಸಭೆ ಸದಸ್ಯನೊಬ್ಬ ನೇಮ್ ಪ್ಲೇಟ್ ನಿಂದ ಹಲ್ಲೆ ಮಾಡಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ವಾರ್ಡ ನಂ. 22ರ ಜೆಡಿಎಸ್ ನ ಶರಣಗೌಡ ಪಾಟೀಲ(ಚಟ್ನಳ್ಳಿ) ಎಂಬುವವರೇ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿದ ಸದಸ್ಯ.

ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ದಖನಿ ಕೋಣೆಯಲ್ಲಿ ಕೆಲವು ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದರು. ಆಗ ಶರಣಗೌಡ ತಮ್ಮ ವ್ಯಾಪ್ತಿಯ ವಾರ್ಡಿನಲ್ಲಿ ಔಷಧ ಸಿಂಪರಣೆ ವಿಷಯವಾಗಿ ಆಕ್ರೋಷ ವ್ಯಕ್ತ ಪಡಿಸಿದ ವೇಳೆ, ಮುಖ್ಯಾಧಿಕಾರಿ ಎಲ್ಲ ವಾರ್ಡಿನಲ್ಲಿ ಸಿಂಪಡನೆ ಮಾಡಲಾಗುತ್ತಿದೆ ಎಂದು ಸಮಜಾಯಿಸಿ ನೀಡಿ ಎದ್ದು ಹೊರ ನಡೆಯುವ ವೇಳೆ ಸದಸ್ಯ ಶರಣಗೌಡ, ಏಕಾಏಕಿ ಅವಾಚ್ಯವಾಗಿ ನಿಂದಿಸುತ್ತಲೇ ಟೇಬಲ್ ಮೇಲಿದ್ದ ನೇಮ್ ಪ್ಲೇಟ್ ನಿಂದ ಮುಖಕ್ಕೆ ಹೊಡೆದು ಮತ್ತೆ ಕಪಾಳಮೋಕ್ಷ ಮಾಡಿ, ಅಲ್ಲಿಂದ ಪರಾರಿಯಾಗಿದ್ದಾನೆ.

ಹಲ್ಲೆ ಮಾಡಿದ ಪರಿಣಾಮ ಮುಖ್ಯಾಧಿಕಾರಿ ಮೂಗಿಗೆ ಗಾಯವಾಗಿದ್ದು, ಸಧ್ಯ ಅಧಿಕಾರಿ ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಪುರಸಭೆ ಆಡಳಿತಾಧಿಕಾರಿ ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಡಿಎಸ್ಪಿ ತಹಶೀಲ್ದಾರ ಸಂಜೀವಕುಮಾರ ದಾಸರ, ತುಳಜಪ್ಪ ಎಸ್. ಸುಲ್ಪಿ, ಸಿಪಿಐ ಸತೀಶ ಕಾಂಬಳೆ, ಠಾಣಾಧಿಿಕಾರಿ ಸಂಗಮೇಶ ಹೊಸಮನಿ ಭೇಟಿ ನೀಡಿ ಹಲ್ಲೆಗೊಳಗಾದ ಅಧಿಕಾರಿಯ ಆರೋಗ್ಯ ವಿಚಾರಿಸಿ, ಘಟನೆ ವಿವರ ಪಡೆದಿದ್ದಾರೆ.

ಅಧಿಕಾರಿ ಮೇಲೆ ಹಲ್ಲೆ ನಡೆದ ಪರಿಣಾಮ ಪುರಸಭೆಯ ಪೌರ ಕಾರ್ಮಿಕರು ಆಸ್ಪತ್ರೆಗೆ ಆಗಮಿಸಿ, ಈ ಹಿಂದೆಯೂ ಜೆಡಿಎಸ್ ಕಾರ್ಯಕರ್ತರೊಬ್ಬರು ವೈಯಕ್ತಿಕ ವಿಚಾರದಲ್ಲಿ ಹಲ್ಲೆ ಮಾಡಿದ್ದರು.

ಈಗ ಚುನಾಯಿತ ಜೆಡಿಎಸ್ ಸದಸ್ಯನೊಬ್ಬ ಪುನಃ ಮುಖ್ಯಾಧಿಕಾರಿ ಮೇಲೆ 2ನೇ ಬಾರಿ ಹಲ್ಲೆ ನಡೆಸಿರುವುದು ಆಡಳಿತಾಧಿಕಾರಿ ಮತ್ತು ಶಾಸಕರ ಹಾಗು ಚುನಾಯಿತರ ಮಧ್ಯ ಹಲವು ಸಂಶಯ ವ್ಯಕ್ತವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos