ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಪರ ಮುಖೇಶ್ ಅಂಬಾರಿ ಬ್ಯಾಟಿಂಗ್!

ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಪರ ಮುಖೇಶ್ ಅಂಬಾರಿ ಬ್ಯಾಟಿಂಗ್!

ಮುಂಬೈ, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಮುಕೇಶ್ ಅಂಬಾನಿ ಮುಂಬೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಪರ ಬ್ಯಾಟ್ ಬೀಸಿದ್ದಾರೆ. ಇದರಿಂದ ತಮ್ಮ ಅನಿಲ್ ಅಂಬಾನಿ ವಿರುದ್ಧ ಮುಕೇಶ್ ಅಂಬಾನಿ ನಿಲುವು ಪ್ರಕಟವಾದಂತಾಗಿದೆ. ವಿಡಿಯೋ ಒಂದರಲ್ಲಿ ಮಿಲಿಂದ್ ದಿಯೋರಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮುಕೇಶ್ ಹೇಳಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಮಿಲಿಂದ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಮಿಲಿಂದ್ ದಕ್ಷಿಣ ಮುಂಬೈಗೆ ಸೂಕ್ತ ವ್ಯಕ್ತಿ. ದಕ್ಷಿಣ ಮುಂಬೈ ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ವ್ಯವಸ್ಥೆ ಕುರಿತು ಅವರಿಗೆ ಆಳವಾದ ಜ್ಞಾನವಿದೆ’ ಎಂದು ಮಿಲಿಂದ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮುಕೇಶ್ ಹೇಳಿದ್ದಾರೆ. ‘ಸಣ್ಣ ಅಂಗಡಿ ನಡೆಸುವವರಿಂದ ದೊಡ್ಡ ಕೈಗಾರಿಕೋದ್ಯಮಿಗಳವರೆಗೆ- ಎಲ್ಲರಿಗೂ ದಕ್ಷಿಣ ಮುಂಬೈ ಎಂದರೆ ಉದ್ಯಮ. ನಾವು ಮುಂಬೈಗೆ ಉದ್ಯಮವನ್ನು ಮರಳಿ ತರುವುದು ಮತ್ತು ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ’ ಎಂದು ಮಿಲಿಂದ್ ದಿಯೋರಾ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಸಾಲ ತೀರಿಸಲು ನೆರವಾದ ಅಣ್ಣ-ಅತ್ತಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ, ರಾಜಕೀಯ ಅಭ್ಯರ್ಥಿಯೊಬ್ಬರ ಪರ ಪ್ರಚಾರ ನಡೆಸಿರುವುದು ಅಪರೂಪವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos