ಆ. 14 ರಂದು ಎಂಟಿಬಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ !

ಆ. 14 ರಂದು ಎಂಟಿಬಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ !

ಹೊಸಕೋಟೆ, ಆ. 6: ಮಾಜಿ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ದಿನಾಂಕ 14 ರಂದು ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಈ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಹಿಸುವರು ಎಂದು ವಿಧಾನಪರಿಷತ್ ಸದಸ್ಯ ಎಸ್. ರಿವಿ ಹೇಳಿದರು. ಅವರು ಹೊಸಕೋಟೆ ಪ್ರವಾಸಿ ಮಂದಿರದಲ್ಲಿ ಹೊಸಕೋಟೆ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕ್ಲಸ್ಟಕರ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರದಲ್ಲಿ ನಮ್ಮ ಶಾಸಕರಾಗಿದ್ದ ಎಂಟಿಬಿ ನಾಗರಾಜಣ್ಣನವರನ್ನು ಮಂತ್ರಿ ಮಾಡಿದ್ದೇವು.

ಆದರೂ ಎಲ್ಲವನ್ನು ಬಿಟ್ಟು ಬಂಡಾಯವೆದ್ದು ಬಿಜೆಪಿಯವರ ಜೋತೆ ಮುಂಬೈಗೆ ಹೋದರು. ಒಬ್ಬ ಎಸಿನಾ ವರ್ಗವಣೆ ಮಾಡಲಿಲ್ಲ ಎಂದು ಅವರು ಅಸಮಧಾನಗೊಂಡರೆ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ ನಾಲ್ಕು ಶಾಸಕರುಗಳಪೈಕಿ ಇಬ್ಬರು ಜೆಡಿಎಸ್ ಶಾಸಕರು ಇದ್ದಾರೆ ಅವರ ಮಾತುಗಳನ್ನು ಕೇಳಬೇಕಾಗುತ್ತೆ. ರಾಜಿನಾಮೇ ನೀಡಿದ ನಂತರ ನಾವು ನಮ್ಮ ಡಿ.ಕೆಶಿ ಮಧ್ಯರಾತ್ರಿ ಮನೆಗೆ ಹೋದರು ಎರಡು ಗಂಟೆಯವರೆಗೂ ಬಾಗಿಲಿ ತೆಗೆಯಲಿಲ್ಲ ನಂತರ ಹೋಗಿ ಮಾತು ಕಥೆ ಮುಗಿಸಿ ಬೆಳಗಿನ ಜಾವ ಮಿಡಿಯಾ ಮುಂದೆ ಮತನಾಡಿ ನಾನು ಕಾಂಗ್ರೆಸ್ಸಲ್ಲಿ ಮುಂದುವರಿಯುವುದಾಗಿ ತಿಳಿಸಿ ಮಗನ ಮಾತು ಕೇಳಿ ನೀವು ಬಾಂಬೆಗೆ ಹೋಗಿದ್ದು ಎಷ್ಟು ಸರಿ ಮಗ ಹೇಳುತ್ತಾನೆ ಬೀಡಿ ಸರ್ ಹೊಸಕೋಟೆಯ ಮುಖಂಡರುಗಳ ಯೋಗ್ಯತೆ ನಮಗೆ ಗೋತ್ತಿದೆ.

ಎರಡು ಸಾವಿರ ಬದಲು ನಾಲ್ಕು ಸಾವಿ ಬಿಸಾಕಿದರೆ ಓಟು ಹಾಕುತ್ತಾರೆ ಅಂತ ಅವರ ಮಗ ನಿತೀನ್ ಪುರುಷೋತ್ತಮ್ ನನಗೆ ಹೇಳುತ್ತಾರೆ. ಇದು ಅಪ್ಪ ಮಗನ ಅಧಿಕಾರ ಮತ್ತು ಹಣದರ್ಪದಿಂದ ಈ ಮಾತುಗಳನ್ನು ಹಾಡಿದ್ದಾರೆ. ಈ ತಾಲ್ಲೂಕಲ್ಲಿ ಕಾಂಗ್ರೆಸ್ ಪಕ್ಷವನ್ನು ಎಂಟಿಬಿ ಬಂದು ಹಿಂದಿನಿಂದ ಕಟ್ಟಿಲ್ಲ. ಯಾವುದಾದರೆ ಗ್ರಾಮ ಪಂ, ನಿಂತು ಗೆದ್ದಿಲ್ಲ, ಕಟ್ಟಿ ಬೆಳಸಿದ ಪಕ್ಷದಲ್ಲಿ ಬಂದು ನಿಂತು ಗೆದ್ದು ಶಾಸಕರಾಗಿ ಮಂತ್ರಿಗಳಾಗಿದ್ದು. ನೀವು ಬರುವುದಕ್ಕೂ ಮುನ್ನ ಇಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿತ್ತು ಎಂದು ಮಗ ಮತ್ತು ಎಂಟಿಬಿ ನಾಗರಾಜು ವಿರುದ್ಧ ನಾಯಕರುಗಳು ಹರಿ ಹಾಯ್ದರು.

ಸಭೆಯನ್ನು ಉದ್ದೇಶಿಸಿ ಮಾಲೂರು ಶಾಸಕರಾದ ಕೆವೈ ನಂಜೇಗೌಡ ಮಾತನಾಡಿ ಯಾವುದೇ ಕಾರಣಕ್ಕೂ ಹೆದರಬೇಡಿ ಇಲ್ಲಿ ನಾಗರಾಜ್ ಹೋದರೆನಂತೆ ನೀವು ಪಕ್ಷವನ್ನು ಸಂಘಟನೆ ಮಾಡಿ ಮತ್ತೆ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರು ಗೆಲ್ಲಿಸುವ ಹೋಣೆ ನಮ್ಮೆಲ್ಲರದ್ದು ಎಂದರು.

ಸಭೆಯನ್ನು ಉದ್ದೇಶಿಸಿ ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳಾದ ತಿರುವರಂಗ ನಾರಾಯಣಸ್ವಾಮಿ, ವಿ ಪ್ರಸಾದ್, ಕೆಪಿಸಿಸಿ ಸದಸ್ಯ ಪಿ.ಮುನಿರಾಜು, ಕಮಲಾಕ್ಷಿರಾಜಣ್ಣ, ಖಾಜಿಹೊಸಹಳ್ಳಿ ಶಿವಕುಮಾರ್, ನಾರಾಯಣಗೌಡ ಮಾತನಾಡಿದರು. ಈ ಸಭೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು, ತಾಲ್ಲೂಕು ಪಂಚಾಯ್ತಿ ಸದಸ್ಯರುಗಳು. ಬ್ಲಾಕ್ ಮಾಜಿಗಳು ಹಾಲಿಗಳು ಕಾರ್ಯಕರ್ತರುಗಳು ಹಾಜರಿದ್ದರು. ಸುಮಾರು 500 ಜನ ಕಾರ್ಯಕರ್ತರು ಈ ಸಭೆಯಲ್ಲಿ ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos