ಕಲಬುರಗಿಗೆ ಆಗಮಿಸಿದ ಮೋದಿ

ಕಲಬುರಗಿಗೆ ಆಗಮಿಸಿದ ಮೋದಿ

ಬೆಂಗಳೂರು: ಇಡೀ ದೇಶದಾದಂತ್ಯ ಲೋಕಸಭೆ ಚುನಾವಣೆಯ ಬಿಸಿ ರಂಗೇರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. 2024ರ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಲು ಮೋದಿ ಅವರು ಇಂದು ಕಲಬುರಗಿಗೆ ಆಗಮಿಸುತ್ತಿದ್ದಾರೆ. ಮೋದಿ ಅವರ ಸ್ವಾಗತಕ್ಕೆ ಕಲಬುರಗಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಕಲಬುರ್ಗಿ ನಗರಕ್ಕೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾನ ನಗರಕ್ಕೆ ಆಗಮಿಸಿದರು ಪೊಲೀಸ್ ಪರೇಡ್ ಮೈದಾನದ ಎಲಿಪ್ಯಾಡ್ ಬಂದಿಳಿದ ಪ್ರಧಾನಿಯನ್ನು ಜಿಲ್ಲಾಧಿಕಾರಿ ಫೌಝಿಯಾ  ತರನ್ನೂನ್ ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲಾಡಳಿತ ಪರವಾಗಿ ಸ್ವಾಗತಿಸಿದರು‌, ಬಳಿಕ ನರೇಂದ್ರ ಮೋದಿ ಲೋಕಸಭಾ ಚುನಾವಣೆ ಪ್ರಚಾರ ಸಮಾವೇಶಕ್ಕೆ ತೆರಳಿದರು.

ಕಲಬುರಗಿಯ ಎನ್ ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಇಂದು ಮಧ್ಯಾಹ್ನ ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್‌ಪೋರ್ಟ್‌ಗೆ ವಿಶೇಷ ವಿಮಾನ ಮೂಲಕ ಮೋದಿ ಆಗಮಿಸುವರು. ಏರ್‌ಪೋರ್ಟ್‌ನಿಂದ ಸೇನಾ ಹೆಲಿಕ್ಯಾಪ್ಟರ್ನಲ್ಲಿ ನಗರದ ಡಿಎಆರ್ ಪೊಲೀಸ್ ಮೈದಾನಕ್ಕೆ ಆಗಮಿಸುವರು. ಬಳಿಕ ಹೆಲಿಪ್ಯಾಡ್ನಿಂದ ಸಮಾವೇಶ ನಡೆಯುವ ಎನ್‌ವಿ ಮೈದಾನದವರೆಗೆ 10 ರಿಂದ 12 ನಿಮಿಷಗಳ ಕಾಲ 2.5 ಕಿ.ಮೀ ವರೆಗೆ ಸೆಮಿ ರೋಡ್ ಶೋ ನಡೆಸುವರು. ನಂತರ ಎನ್ ವಿ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos