ಲೋಕಸಭೆ ಚುನಾವಣೆ: ಇಂದು ಕಲಬುರಗಿಗೆ ಮೋದಿ ಆಗಮನ

ಲೋಕಸಭೆ ಚುನಾವಣೆ: ಇಂದು ಕಲಬುರಗಿಗೆ ಮೋದಿ ಆಗಮನ

ಕಲಬುರಗಿ: ಇಡೀ ದೇಶದಾದಂತ್ಯ ಲೋಕಸಭೆ ಚುನಾವಣೆಯ ಬಿಸಿ ರಂಗೇರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.2024ರ ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಲು ಮೋದಿ ಅವರು ಇಂದು ಕಲಬುರಗಿಗೆ ಆಗಮಿಸುತ್ತಿದ್ದಾರೆ. ಮೋದಿ ಅವರ ಸ್ವಾಗತಕ್ಕೆ ಕಲಬುರಗಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಲಬುರಗಿಯ ಎನ್ ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಇಂದು ಮಧ್ಯಾಹ್ನ ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್‌ಪೋರ್ಟ್‌ಗೆ ವಿಶೇಷ ವಿಮಾನ ಮೂಲಕ ಮೋದಿ ಆಗಮಿಸುವರು. ಏರ್‌ಪೋರ್ಟ್‌ನಿಂದ ಸೇನಾ ಹೆಲಿಕ್ಯಾಪ್ಟರ್ನಲ್ಲಿ ನಗರದ ಡಿಎಆರ್ ಪೊಲೀಸ್ ಮೈದಾನಕ್ಕೆ ಆಗಮಿಸುವರು. ಬಳಿಕ ಹೆಲಿಪ್ಯಾಡ್ನಿಂದ ಸಮಾವೇಶ ನಡೆಯುವ ಎನ್‌ವಿ ಮೈದಾನದವರೆಗೆ 10 ರಿಂದ 12 ನಿಮಿಷಗಳ ಕಾಲ 2.5 ಕಿ.ಮೀ ವರೆಗೆ ಸೆಮಿ ರೋಡ್ ಶೋ ನಡೆಸುವರು. ನಂತರ ಎನ್ ವಿ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

ಬೀದರ್ ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರದ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಎನ್ ವಿ ಮೈದಾನದ ಸುತ್ತಲೂ ಪೊಲೀಸರ ಸರ್ಪಗಾವಲು ಇರಲಿದ್ದು, ಬಂದೋಬಸ್ತ್ಗೆ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
2019ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ಕಲಬುರಗಿಯಿಂದ ಪ್ರಚಾರ ಆರಂಭಿಸಿದ್ದರು. ಈ ಬಾರಿಯೂ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಿಂದಲೇ ಲೋಕ ಸಮರಕ್ಕೆ ಮತಬೇಟೆ ಶುರು ಮಾಡ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos