ಹಾಲು ಕುಡಿದ ವಾನರ

ಹಾಲು ಕುಡಿದ ವಾನರ

ನೆಲಮಂಗಲ, ಜ. 16 : ಬಿಸಿಲಿನ ಧಗೆಗೆ ಮಗುವಿಗೆ ಕುಡಿಸಲು ಬ್ಯಾಗ್ನಲ್ಲಿ ಇಟ್ಟಿದ್ದ ಹಾಲಿನ ಬಾಟಲ್ ಕದ್ದು ವಾನರ ಕುಡಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ನಡೆದಿದೆ.
ಮಗುವಿನ ಹಾಲಿನ ಬಾಟಲ್ ಹಿಡಿದು ಕೋತಿಯೊಂದು ಹಾಲನೇಲ್ಲಾ ಖಾಲಿ ಖಾಲಿ ಮಾಡಿರುವುದನ್ನು ಸ್ಥಳದಲ್ಲಿರುವವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕೋತಿಯೊಂದು ಬಾಟಲಿನಲ್ಲಿ ಹಾಲು ಕುಡಿಯುತ್ತಿರುವುದನ್ನು ಕಾಣಬಹುದಾಗಿದೆ.
ಈಗಾಗಲೇ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ನೀರಿಲ್ಲದೆ ಪರದಾಟ ಪ್ರಾರಂಭವಾಗಿದೆ.

ನೀರಿನ ಅಭಾವ ಪ್ರಾರಂಭದಲ್ಲಿ ಪ್ರಾಣಿಗಳಿಗೆ ತಟ್ಟಿದೆ. ಹೀಗಾಗಿ ಬೇಸಿಗೆ ಆರಂಭದಲ್ಲೇ ನೀರಿಗೆ ಹಾಹಾಕಾರ ಎನ್ನುವಂತಾಗಿದೆ. ಆದ್ದರಿಂದ ಪ್ರಾಣಿಪ್ರಿಯರು ಕೋತಿಗಳಿಗೆ ಸಹಕರಿಸಬೇಕೆಂದು ಪ್ರವಾಸಿಗರು ಹೇಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos