ಹುಡುಗರ ವಿಡಿಯೋಗೆ ಮೈಕಲ್ ಫಿದಾ!

ನವದೆಹಲಿ,ಅ. 6 : ವಿಡಿಯೋದಲ್ಲಿ ಹಳ್ಳಿಯ ಹುಡುಗರು ಕ್ರಿಕೆಟ್ ಆಟದ ವಿಭಿನ್ನತೆ ಮೆರೆದಿದ್ದರು. ಗ್ರಾಮದ ರಸ್ತೆಬದಿಯ ಚಿಕ್ಕದಾದ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ತಮ್ಮ ಸೃಜನಶೀಲತೆ ತೋರಿದ್ದರು. ಸ್ಟ್ರೈಕರ್ ವಿಭಾಗದಲ್ಲಿ ಬ್ಯಾಟ್ ಹಿಡಿದು ನಿಂತಿದ್ದ ಹುಡುಗನ ಎದುರು ಓಡಿಬಂದ ಪುಟ್ಟ ಬಾಲಕ ಬ್ಯಾಟ್ ಮೇಲೆ ಜಿಗಿದು, ಸ್ಲಿಪ್ ವಿಭಾಗದಲ್ಲಿ ನಿಂತಿದ್ದ ಕ್ಷೇತ್ರ ರಕ್ಷಕನ ಕೈಗೆ ಹಾರುತ್ತಾನೆ. ಈ ವೇಳೆ ಅದ್ಭುತ ಕ್ಯಾಚ್ ಎಂಬ ಕಾಮೆಂಟರಿಯ ಹಿನ್ನೆಲೆ ಧ್ವನಿ ಬರುತ್ತಿರುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಸಾಕಷ್ಟು ಮಂದಿ ವೀಕ್ಷಣೆ ಮಾಡಿ, ಹುಡುಗರು ಕ್ರಿಯೆಟಿವಿಟಿಗೆ ಶಹಬ್ಬಾಸ್ ಎಂದಿದ್ದರು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕಾಮೆಂಟರ್ ಮೈಕಲ್ ವಾನ್ ಹುಡುಗರ ವಿಡಿಯೋಗೆ ಫಿದಾ ಆಗಿದ್ದಾರೆ. ವಿಡಿಯೋವನ್ನು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡು ” ಆಡಲು ಕಷ್ಟಕರವಾದ ಎಸೆತ… ಶ್ರೇಷ್ಠ ಕ್ಯಾಚ್ಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ. ಪುಟ್ಟ ಗ್ರಾಮವೊಂದರ ಹುಡುಗರ ಈ ವಿಡಿಯೋ ಅಂತಾರಾಷ್ಟ್ರೀಯ ಆಟಗಾರ ಮೈಕಲ್ ವಾಘನ್ ಕಣ್ಣಿಗೆ ಬಿದ್ದಿರುವುದು ಸಾಮಾಜಿಕ ಜಾಲತಾಣದ ಪ್ರಾಮುಖ್ಯತೆಗೆ ಸಾಕ್ಷಿ.

 

 

Unplayable delivery .. One of the great catches .. !!!!

Posted by Michael Vaughan on Tuesday, September 10, 2019

 

 

ಫ್ರೆಶ್ ನ್ಯೂಸ್

Latest Posts

Featured Videos