ಕಡಿಮೆ ಸಮಯದಲ್ಲಿ ರುಚಿಕರವಾಗಿ ತಯಾರಿಸಿ ಮೇಥಿ ಪರೋಟ

ಕಡಿಮೆ ಸಮಯದಲ್ಲಿ ರುಚಿಕರವಾಗಿ ತಯಾರಿಸಿ ಮೇಥಿ ಪರೋಟ

ಉತ್ತರ ಭಾರತದ ಪ್ರಸಿದ್ದ ಖಾದ್ಯ ಪರೋಟ. ಹಲವು ಪೋಷಕಾಂಶಗಳ ಆಗರ ಪರೋಟ. ವಿಧ ವಿಧವಾದ ಪರೋಟಗಳ ಮಧ್ಯೆ ನಾವಿಂದು ನಿಮಗೆ ಮೇಥಿ ಪರೋಟದ ಬಗ್ಗೆ ತಿಳಿಸುತ್ತಿದ್ದೇವೆ. ಕಡಿಮೆ ಸಮಯದಲ್ಲಿ ರುಚಿಕರವಾಗಿ ತಯಾರಿಸಿ ಮೇಥಿ ಪರೋಟ.

ಅಗತ್ಯ ಸಾಮಗ್ರಿಗಳು:

ಗೋಧಿಹಿಟ್ಟು – 1 ಕಪ್

ಮೆಂತ್ಯ ಸೊಪ್ಪು- 2 ಕಟ್ಟು

ಖಾರದ ಪುಡಿ -1 ಚಮಚ

ಗರಂಮಸಾಲ -1/2 ಚಮಚ

ಉಪ್ಪು- ರುಚಿಗೆ

ನೀರು – ಕಲೆಸಲು

ಎಣ್ಣೆ – ಸ್ವಲ್ಪ

ಮಾಡುವ ವಿಧಾನ

ಅಗತ್ಯ ಸಾಮಗ್ರಿಗಳನ್ನು ಒಂದು ಪಾತ್ರೆಗೆ ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಸ್ವಲ್ಪ ನೆನೆದ ನಂತರ, ಗುಂಡಾದ ಆಕಾರದಲ್ಲಿ ಲಟ್ಟಿಸಿಕೊಳ್ಳಿ.

ಕಾದ ತವದ ಮೇಲೆ , ಲಟ್ಟಿಸಿಟ್ಟುಕೊಂಡಿರುವ ಪರೋಟವನ್ನು ಎರಡೂ ಕೆಡೆ ಎಣ್ಣೆ ಹಾಕಿ ಬೇಯಿಸಿದರೆ , ಬಿಸಿ ಬಿಸಿ ಪರೋಟವನ್ನು ಮೊಸರಿನೊಂದಿಗೆ ಸವಿಯಲು ಸಿದ್ದ.

ಫ್ರೆಶ್ ನ್ಯೂಸ್

Latest Posts

Featured Videos