ಮೇಷ್ಟ್ರು ನೋಡೋಕ್ಕೆ ದರ್ಶನ್ ಬರ್ತಾರೆ .!

ಮೇಷ್ಟ್ರು ನೋಡೋಕ್ಕೆ ದರ್ಶನ್ ಬರ್ತಾರೆ .!

ಬೆಂಗಳೂರು, ಅ.21 : ಜಗ್ಗಣ್ಣ ಈ ಸಿನಿಮಾದಲ್ಲಿ ತಮ್ಮ ಹಳೇ ಖದರ್ನಲ್ಲಿ ಪ್ರೇಕ್ಷಕರನ್ನ ರಂಜಿಸೋಕ್ಕೆ ಬರ್ತಿದ್ದು, ಇಂದು ಸಂಜೆ ಕಾಳಿದಾಸ ಕನ್ನಡ ಮೇಷ್ಟ್ರು ಟ್ರೈಲರ್ ಅನಾವರಣವಾಗಲಿದೆ. ನವರಸ ನಾಯಕ ನಟ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು, ಚಿತ್ರದ ಟ್ರೈಲರ್ ಅನ್ನ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಲಾಂಚ್ ಮಾಡಲಿದ್ದಾರೆ. ಕವಿರಾಜ್ ನಿರ್ದೇಶನದ ಸಿನಿಮಾದಲ್ಲಿ ಜಗ್ಗೇಶ್, ಕನ್ನಡ ಮೇಷ್ಟ್ರ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಮೇಘನಾ ಗಾಂವ್ಕರ್ ನಾಯಕಿಯಾಗಿ ಮಿಂಚಿದ್ದಾರೆ. ಕಪ್ಪುಬೋರ್ಡ್ ಮುಂದೆ ನಿಂತು ಜಗ್ಗೇಶ್ ಅವರು, ಕನ್ನಡ ಅಂದ್ರೇ ಅವ್ವ,ಇಂಗ್ಲಿಷ್ ಅಂದ್ರೇ ದೆವ್ವ ಎಂದು ಬರೆದ ಸಾಲುಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿವೆ. ಅವರ ಇಮೇಜ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ.ಮೇಘನಾ ಗಾಂವ್ಕರ್ ಈ ಚಿತ್ರದ ನಾಯಕಿ. ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಗುಂಡ್ಲುಪೇಟೆ ಛಾಯಾಗ್ರಹಣವಿದೆ. ಅಂಬಿಕಾ, ತಬಲ ನಾಣಿ, ಟಿ.ಎಸ್. ನಾಗಾಭರಣ ತಾರಾಗಣದಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos