ಧ್ಯಾನದಿಂದ ಮನುಷ್ಯನ ಕೋಪ ಕಡಿಮೆ

ಧ್ಯಾನದಿಂದ ಮನುಷ್ಯನ ಕೋಪ ಕಡಿಮೆ

ಚಾಮರಾಜನಗರ: ಧ್ಯಾನ ಮನುಷ್ಯನ ಕೋಪವನ್ನು ಕಡಿಮೆ ಮಾಡುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿ ಧ್ಯಾನದಿಂದ ಉತ್ತಮ ಮನುಷ್ಯರಾದರು ಎಂದು ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು.

ಭಾರತೀಯ ಬೌದ್ಧ ಮಹಾಸಭಾ ಚಾಮರಾಜನಗದಿಂದ ಕರಿನಂನಪುದರದ ರಸ್ತೆಯಲ್ಲಿರುವ ಬೌದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಪುಸ್ತಕಗಳನ್ನು ಓದುವುದರಿಂದ ಜ್ಞಾನ ಬೆಳೆಯುತ್ತದೆ. ಪ್ರತಿದಿನ ಒಂದು ತಾಸುಗಳ ಕಾಲ ಧ್ಯಾನವನ್ನು ಮಾಡುವುದರಿಂದ ಮನಸ್ಸು ಶುದ್ಧವಾಗುತ್ತದೆ. ಬುದ್ಧನ ತತ್ತ್ವಗಳನ್ನು ಅಂಬೇಡ್ಕರ್ ಅವರು ಆಲಿಸಿದ್ದರು ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ಡಿ. 29 ವಿಶೇಷವಾದ ದಿನವಾಗಿದೆ. ಅಂಬೇಡ್ಕರ್ ಅವರು ದುಂಡು ಮೇಜಿನ ಸಭೆಗೆ ಹಾಜರಾದ ದಿನವಾಗಿದ್ದು, ಆ ದಿನ ಬೇರೆ ದೇಶಗಳಿಗೆ ಬೌದ್ಧರಿಗಿಂತ ಶ್ರೀಲಂಕದ ಬೌದ್ಧರಿಗೆ ಅತ್ಯಂತ ಮಹತ್ವದ ದಿನವಾಗಿದೆ. 2,562 ವರ್ಷಗಳ ಹಿಂದೆ ಪವಿತ್ರವಾದ ಜಯಗಿರಿ ಮಹಾಬೋಧಿ ವೃಕ್ಷದ ಗಿಡವನ್ನು ಬುದ್ಧ ಗಯಾದಿಂದ ಶ್ರೀಲಂಕದ ಅನುರಾಧಪುರಕ್ಕೆ ತರಲಾಯಿತು ಎಂದರು.

ಆಗ ಅಲ್ಲಿ ಸಾಮ್ರಾಟ್ ಅಶೋಕ ಪುತ್ರರಾದ ಮಹೀಂದ್ರ(ಮಹೇಂದ್ರ) ಆ ಸಮಯದಲ್ಲಿ ಶ್ರೀಲಂಕಾಕ್ಕೆ ಬೌದ್ಧ ಧರ್ಮವನ್ನು ತಂದರು. ಹಾಗೆಯೇ ಅವರ ತಂಗಿ ಸಂಘಮಿತ್ರೆಯ 18ನೇ ವಯಸ್ಸಿನಲ್ಲಿಯೇ ಬಿಕ್ಕುಣಿಯಾದರು. ಇವರಿಬ್ಬರು ವಿಶ್ವದಾದ್ಯಂತ ಬೌದ್ಧ ಧರ್ಮವನ್ನು ಸಾರುತ್ತ ಬಂದಿದ್ದರು. ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ಪುನರ್‌ಜೀನಕ್ಕೆ ದೇಶಾದ್ಯಂತ ಪ್ರಚಾರ ಮಾಡುತ್ತ ಬಂದರು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos