ಮತ್ತೆ ಬ್ಯಾಟ್ ಬೀಸಲಿದ್ದಾರೆ ಸಚಿನ್, ಲಾರಾ..!

ಮತ್ತೆ ಬ್ಯಾಟ್ ಬೀಸಲಿದ್ದಾರೆ ಸಚಿನ್, ಲಾರಾ..!

ಮುಂಬೈ, ಅ.16 : ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಮತ್ತೆ ಬ್ಯಾಟ್ ಬೀಸಲಿದ್ದಾರೆ. ಭಾರತದಲ್ಲಿ ನಡೆಯುವ ವಿಶೇಷ ಸರಣಿಯಲ್ಲಿ ಸಚಿನ್, ಸೆಹ್ವಾಗ್, ಲಾರಾ ಸೇರಿದಂತೆ ವಿಶ್ವ ಕ್ರಿಕೆಟ್ ತಾರೆಗಳು ಟಿ20 ಪಂದ್ಯವನ್ನಾಡಲಿದ್ದಾರೆ. ವಿಶ್ವ ಸರಣಿಯಲ್ಲಿ ಆಡಲು ಕ್ರಿಕೆಟ್ ದಿಗ್ಗಜರು ಒಪ್ಪಿಗೆ ನೀಡಿರುವುದಾಗಿ ವರದಿಯಾಗಿದೆ.
ಸಚಿನ್, ಲಾರಾ, ಮುತ್ತಯ್ಯ ಮುರಳೀಧರನ್, ದಿಲ್ಶಾನ್ (ಶ್ರೀಲಂಕಾ), ಜಾಕ್ ಕಾಲೀಸ್, ಜಾಂಟಿ ರೋಡ್ಸ್ (ದ.ಆಫ್ರಿಕಾ), ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) ಹಾಗೂ ಬ್ರೆಟ್ ಲೀ (ಆಸ್ಟ್ರೇಲಿಯಾ) ಕೂಡಾ ಈ ಟೂರ್ನಮೆಂಟ್ನಲ್ಲಿ ಕಣಕ್ಕಿಳಿಯಲಿದ್ದಾರೆ.

2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಸಚಿನ್ ಬಳಿಕ 2015ರಲ್ಲಿ ಯುಎಸ್ಎನಲ್ಲಿ ಕ್ರಿಕೆಟ್ ಪ್ರಚಾರಕ್ಕಾಗಿ ಟಿ20 ಟೂರ್ನಮೆಂಟ್ನಲ್ಲಿ ಕಾಣಿಸಿಕೊಂಡಿದ್ದರು. ಈ ಟೂರ್ನಿಯಲ್ಲಿ ಶೊಯೇಬ್ ಅಖ್ತರ್ ಸೇರಿದಂತೆ ಒಂದಷ್ಟು ಮಾಜಿ ಕ್ರಿಕೆಟಿಗರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos