ನ್ಯೂಜಿಲೆಂಡ್ ಮಸೀದಿ ಶೂಟೌಟ್; 27 ಸಾವು, 3 ವ್ಯಕ್ತಿಗಳ ಬಂಧನ!

ನ್ಯೂಜಿಲೆಂಡ್ ಮಸೀದಿ ಶೂಟೌಟ್; 27 ಸಾವು, 3 ವ್ಯಕ್ತಿಗಳ ಬಂಧನ!

ಕ್ರೈಸ್ಟ್‌ಚರ್ಚ್(ನ್ಯೂಝಿಲ್ಯಾಂಡ್‍), ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಕ್ರೈಸ್ಟ್‌ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್‌ನಲ್ಲಿ 27 ಮಂದಿ ಮೃತಪಟ್ಟಿದ್ದಾರೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಮುಂಜಾನೆ ನಡೆದ ಈ ದಾಳಿಯ ವೇಳೆ ಮಸೀದಿ ಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ದಾಳಿಯಿಂದ ಎಲ್ಲ ಮಸೀದಿ ಹಾಗೂ ಶಾಲೆಗಳ ಬಾಗಿಲುಗಳು ಮುಚ್ಚಲಾಗಿದೆ ಹಾಗೇಯೇ ಜನರಿಗೆ ಮನೆಗಳಿಂದ ಹೊರಗೆ ಬಾರದಂತೆ ಕೇಂದ್ರ ಕ್ರೈಸ್ಟ್‌ಚರ್ಚ್ ಅಧಿಕಾರಿಗಳು ಸಂದೇಶ ನೀಡಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನ್ಯೂಜಿಲೆಂಡ್ ಪ್ರಧಾನಿ, ನ್ಯೂಜಿಲೆಂಡ್ ಪಾಲಿಗೆ ಕಪ್ಪು ದಿನ ಎಂದು ಹೇಳಿದ್ದಾರೆ. ದಾಳಿಯಲ್ಲಿ ಮಡಿದವರು ಕುಟುಂಬ ಸದಸ್ಯರೊಂದಿಗೆ ಇಡೀ ನ್ಯೂಜಿಲೆಂಡ್ ಬೆಂಬಲವಾಗಿ ಇದೆ ಎಂದರು.

“ಕಪ್ಪು ದಿರಿಸಿನ ವ್ಯಕ್ತಿ ಮಸ್ಜಿದ್ ಅಲ್ ನೂರ್ ಪ್ರವೇಶಿಸಿದ. ಬಳಿಕ ಹತ್ತಾರು ಬಾರಿ ಗುಂಡು ಹೊಡೆದ ಶಬ್ದ ಕೇಳಿಸಿತು. ಜನ ಮಸೀದಿಯಿಂದ ಹೊರಬಂದು ಓಡುತ್ತಿರುವುದು ಕಂಡುಬಂತು” ಎಂದು ಲೆನ್ ಪೆನೇಹಾ ಎಂಬ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನ ದಾಳಿಕೋರ ಓಡಿಹೋಗಿದ್ದನ್ನೂ ಕಂಡಿದ್ದಾಗಿ ಅವರು ವಿವರಿಸಿದ್ದಾರೆ. ಮಸೀದಿಯ ಒಳಗೆ ಹೋಗಿ ನೆರವಿಗೆ ಮುಂದಾದಾಗ, ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅನುಮಾನಾಸ್ಪದ 3 ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos