ಮಂಗಳೂರು: ಬಾಂಬ್ ಇಟ್ಟವನಿಗಾಗಿ ಬೆನ್ನುಬಿದ್ದ ಪೊಲೀಸರು

ಮಂಗಳೂರು: ಬಾಂಬ್ ಇಟ್ಟವನಿಗಾಗಿ ಬೆನ್ನುಬಿದ್ದ ಪೊಲೀಸರು

ಮಂಗಳೂರು, ಜ. 21: ನೆನ್ನೆ ಮಂಗಳೂರಿನ ವಿಮಾನ ನಿಲ್ದಾಣದ ಬಳಿ ಬಾಂಬ್ ಪತ್ತೆಯಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಂಬ್ ಇಟ್ಟವನಿಗಾಗಿ ಮಂಗಳೂರು ಪೊಲೀಸರು ತೀವ್ರ ಹುಡುಕಾಟದಲ್ಲಿ ತೊಡಗಿದ್ದಾರೆ. 23 ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿರುವ ಪೊಲೀಸರು, 3 ಜಿಲ್ಲೆಗಳಲ್ಲಿ ಬಾಂಬ್ ಇಟ್ಟವನಿಗಾಗಿ ಬೆನ್ನು ಬಿದ್ದು ಹುಡುಕಾಟವನ್ನು ನಡೆಸುತ್ತಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಂಕಿತ ಬಾಂಬ್ ಇಟ್ಟ ವ್ಯಕ್ತಿಗಾಗಿ ಹುಡುಕಾಟ ತೀವ್ರಗೊಂಡಿದೆ. ಮಂಗಳೂರಿನ ಪೊಲೀಸರು, ನಿನ್ನೆಯಿಂದಲೇ ಈಗಾಗಲೇ 27 ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ. 3 ಜಿಲ್ಲೆಗಳಲ್ಲಂತೂ ತೀವ್ರವಾಗಿ ಶಂಕಿತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ತೀವ್ರವಾಗಿ ಬಾಂಬ್ ಇಟ್ಟ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿರುವ ಪೊಲೀಸರು, ಆಟೋದಲ್ಲಿ ಬಂದು, ಮಂಗಳೂರಿನ ವಿಮಾನ ನಿಲ್ಧಾಣದ ಟಿಕೆಟ್ ಕೌಂಟರ್ ಬಳಿ ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ. ಈ ಮೂಲಕ ಬಾಂಬ್ ಇಟ್ಟವನಿಗಾಗಿ ಮಂಗಳೂರು ಪೊಲೀಸರು ಬೆನ್ನು ಬಿದ್ದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos