ಒಂದೂವರೆ ಲಕ್ಷ ವೆಚ್ಚದ ಮಂಡಿ ಆಪರೇಷನ್ 67 ರೂನಲ್ಲಿ ಮುಗಿದಿದೆ..!

ಒಂದೂವರೆ ಲಕ್ಷ ವೆಚ್ಚದ ಮಂಡಿ ಆಪರೇಷನ್ 67 ರೂನಲ್ಲಿ ಮುಗಿದಿದೆ..!

ಚಾಮರಾಜನಗರ: ಆಯುಷ್ಮಾನ್ ಭಾರತ್,ಕರ್ನಾಟಕದ ಯೋಜನೆಯಲ್ಲಿ ಚಾಮರಾಜನಗರ ಸಿಮ್ಸ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬಹಳ ದಿನಗಳ ಕಾಲ ಮೊಣಕಾಲು ನೋವಿನಿಂದ ನರಳುತ್ತಿದ್ದ ಐವರು ಮಂಡಿಮೂಳೆ ಅಸ್ಥಿರಜ್ಜು ಮರುನಿರ್ಮಾಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕೇವಲ 67 ರೂಪಾಯಿನಲ್ಲೇ ಚಿಕಿತ್ಸೆ ಮುಗಿದಿದೆ. ಈ ಯೋಜನೆ ಜಾರಿಗೆ ಬಂದು ಐದು ವರ್ಷಗಳು ಕಳೆದಿವೆ, ಬಿಪಿಎಲ್‌ ಕಾರ್ಡ್‌ದಾರರು, ಜಿಲ್ಲಾಸ್ಪತ್ರೆಗಳಲ್ಲಿ ಈ ಕಾರ್ಡ್‌ ತೋರಿಸಿ ಎಂಥಾ ದೊಡ್ಡ ಶಸ್ತ್ರ ಚಿಕಿತ್ಸೆ ಕೂಡಾ ಮಾಡಿಸಿಕೊಳ್ಳಬಹುದು.
ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಜನಾಂಗ ಜ್ವರ, ಕೆಮ್ಮು ಅಂತಾ ಖಾಸಗಿ ಆಸ್ಪತ್ರೆಗೆ ಹೋದ್ರೆ ಸಾವಿರ ರೂಪಾಯಿ ಬಿಲ್ ಆಗುತ್ತೆ. ಇನ್ನು ಆಪರೇಷನ್ ಅಂತಾ ಹೋದ್ರೆ ಲಕ್ಷಗಟ್ಟಲೆ ದುಡ್ಡು ಬೇಕು. ಆದ್ರೆ ಅದೊಂದು ಆಸ್ಪತ್ರೆಯಲ್ಲಿ ಜಸ್ಟ್‌ 67 ರೂಪಾಯಿಗೆ ಮಂಡಿ ನೋವಿನ ಶಸ್ತ್ರ ಚಿಕಿತ್ಸೆ ಆಗಿದೆ.
ಇನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದು ಐದು ವರ್ಷಗಳಾಗಿವೆ. ಆದರೆ ಈ ಯೋಜನೆಯಡಿ ಲಭಿಸುವ ಉಚಿತ ಆರೋಗ್ಯ ಸೇವೆಗಳ ಬಗ್ಗೆ ಬಹುತೇಕ ಜನರಿಗೆ ಮಾಹಿತಿಯ ಇಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಿಮ್ಸ್ ವೈದ್ಯರು ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಿ 5 ಮಂದಿಗೆ ಏಕಕಾಲದಲ್ಲಿ ಆಪರೇಷನ್ ಮಾಡಿದ್ದಾರೆ, ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ್ದರೆ ಸಂಪೂರ್ಣ ಉಚಿತ ಎಂದು ಸಿಮ್ಸ್‌ನ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಮಾರುತಿ ಮಾಹಿತಿ ನೀಡಿದ್ದಾರೆ.

ವರದಿಗಾರ
ಎ ಚಿದಾನಂದ

ಫ್ರೆಶ್ ನ್ಯೂಸ್

Latest Posts

Featured Videos