2020-21ರ ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ

2020-21ರ ಜನಗಣತಿ ಜವಾಬ್ದಾರಿಯಿಂದ ನಿರ್ವಹಿಸಿ

ಗದಗ, ಮಾ. 13: ಗಣತಿದಾರರಿಗೆ ಜನಗಣತಿ ತರಬೇತಿ ಕಾರ್ಯವನ್ನು ಕ್ಷೇತ್ರ ತರಬೇತುದಾರರು ವಿಶೇಷ ಜವಾಬ್ದಾರಿಯಿಂದ ನಿರ್ವಹಿಸಲು ಜಿಲ್ಲೆಯ ಜನಗಣತಿ ಅಧಿಕಾರಿಗಳು ಆದ ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಭಾರತೀಯ ಜನಗಣತಿ 2020-21 ಸಂಬಂಧಿಸಿದಂತೆ ತಾಲೂಕು, ನಗರ, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಜನಗಣತಿ ಕಾರ್ಯದ ಗಣತಿದಾರರಿಗೆ ತರಬೇತಿ ನೀಡುವ ಕ್ಷೇತ್ರ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಜನಗಣತಿ ಕಾರ್ಯಕ್ಕೆ ಹೋಲಿಸಿದಲ್ಲಿ ಈ ಬಾರಿಯ ಜನಗಣತಿ ವಿಧಾನ ಸರಳವಾಗಿದೆ. ಗಣತಿಗಾಗಿ ಅಭಿವೃಧ್ಧಿ ಪಡಿಸಿದ ಆ್ಯಪ್‌ನಲ್ಲೇ ಎಲ್ಲ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಮತ್ತೊಮ್ಮೆ ದತ್ತಾಂಶ ಸೇರ್ಪಡೆ ಮಾಡುವ ಅಗತ್ಯವಿರುವುದಿಲ್ಲ. ನೇಮಕಗೊಂಡಿರುವ ಕ್ಷೇತ್ರ ತರಬೇತುದಾರರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ತರಬೇತುದಾರರು ಐಚ್ಚಿಕ ಮತ್ತು ಕಡ್ಡಾಯವಾಗಿ ನಿರ್ವಹಿಸಬೇಕಾದ ಅಂಶಗಳ ಕುರಿತು ಪರಿಶೀಲಿಸಿ ಜನಗಣತಿ ಕಾರ್ಯ  ಕೈಗೊಳ್ಳುವಂತೆ ಗಣತಿದಾರರನ್ನು ತರಬೇತುಗೊಳಿಸಬೇಕು. ಜನರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ಮತ್ತು ಜನಗಣತಿ ಪೂರ್ವಭಾವಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲು ಗಣತಿದಾರರನ್ನು ಸನ್ನದ್ಧರನ್ನಾಗಿಸಲು  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ. ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗದರ್ಶನದಲ್ಲಿ 2021ರ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ನಡೆಸುವುದು ಮಹತ್ವದ ಕರ್ತವ್ಯವಾಗಿದೆ ಎಂದರು.

ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜನಗಣತಿ ನಿರ್ದೇಶನಾಲಯದ ಗದಗ ಜಿಲ್ಲಾ ನೋಡಲ್ ಅಧಿಕಾರಿ ಜಾಹೀದ  ಹುಸೇನ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಕ್ಷೇತ್ರ ತರಬೇತುದಾರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos