ಮಲಪ್ರಭಾ ನದಿ ಈಜಿದ ಅಜ್ಜ

ಮಲಪ್ರಭಾ ನದಿ ಈಜಿದ ಅಜ್ಜ

ಬೆಳಗಾವಿ, ಆ. 05 : ರಾಜ್ಯದಲ್ಲಿ ಪ್ರವಾಹ ಸ್ವರೂಪಿ ಮಳೆ ಆಗದೇ ಇದ್ದರೂ ನೆರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಪ್ರಕೃತಿ ವಿಕೋಪ ಉಂಟಾಗಿದೆ. ಬೋರ್ಗೆರೆದು ಹರಿಯುತ್ತಿರುವ ಕೃಷ್ಣಾ ನದಿ ಐದು ಜಿಲ್ಲೆಗಳನ್ನು ಅಕ್ಷರಶಃ ಹೈರಾಣಾಗಿಸಿದೆ. ಈ ನಡುವೆ 75 ವಯಸ್ಸಿನ ವೃದ್ಧರೊಬ್ಬರು ಮಲಪ್ರಭಾ ನದಿಯಲ್ಲಿ ಈಜಿ ನೋಡುಗರನ್ನು ಅಚ್ಚರಿಗೊಳಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಭಾನುವಾರವೂ ವರುಣ ಅಬ್ಬರಿಸಿ ಕೃಷ್ಣಾ, ಮಲಪ್ರಭಾ, ವೇದ ಗಂಗಾ, ದೂಧಗಂಗಾ ನದಿಗಳು ಪ್ರವಾಹದ ಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಚಾಪಗಾವಿ ಗ್ರಾಮದಲ್ಲಿ 75 ವರ್ಷದ ವಸಂತ ಅಪ್ಪು ಪಾಟೀಲ ಅವರು ಗ್ರಾಮಸ್ಥರ ವಿರೋಧದ ನಡುವೆಯೂ ನದಿ ದಾಟಲು ಮುಂದಾಗಿದ್ದರು. ಆದರೆ ಸೇತುವೆ ಮೇಲಿಂದ ಕೊಚ್ಚಿ ಹೋಗಿದ್ದರು. ವಸಂತ ಅವರು ಬರೋಬ್ಬರಿ 4 ಕಿ.ಮೀ. ನದಿಯಲ್ಲಿ ಈಜಿ ಹೊರ ಬಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos