” ಉತ್ತರ ಹೇಳಲು ಒಂದು ದಿನ ಟೈಮ್ ಬೇಕು” ಅರ್ಬಾಜ್ ಖಾನ್!

” ಉತ್ತರ ಹೇಳಲು ಒಂದು ದಿನ ಟೈಮ್ ಬೇಕು” ಅರ್ಬಾಜ್ ಖಾನ್!

ಮುಂಬೈ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಪತ್ನಿ ಮಲೈಖಾ ಅರೋರಾ ಮತ್ತು ಅರ್ಜುನ್ ಮದುವೆ ಬಗ್ಗೆ ಅರ್ಬಾಜ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅರ್ಬಾಜ್ ಖಾನ್ ಸರಿಯಾಗಿ ಉತ್ತರಿಸದೆ ಜೋಕ್ ಮಾಡಿ ಸುಮ್ಮನಾಗಿದ್ದಾರೆ. ಅರ್ಬಾಜ್ ಜೋರಾಗಿ ನಗುತ್ತಲೇ ‘ಈ ಪ್ರಶ್ನೆಯನ್ನು ಕೇಳಬೇಕೆಂದು ರಾತ್ರಿಯಿಂದಲೇ ಪ್ಲಾನ್ ಮಾಡಿಕೊಂಡಿದ್ದೀರಾ, ನನಗೂ ಉತ್ತರ ಹೇಳಲು ಒಂದು ದಿನ ಟೈಮ್ ಬೇಕು, ಈಗ ಊಟದ ಸಮಯವಾಗಿದೆ ಹೋಗೋಣ’ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಇದೇ ತಿಂಗಳು 19 ರಂದು ವಿವಾಹವಾಗುತ್ತಿದ್ದಾರಂತೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮದುವೆಯಾಗುತ್ತಿದ್ದು ತೀರಾ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದಾರಂತೆ. ನಟಿ ಕರೀನಾ ಕಪೂರ್, ಕರೀಶ್ಮಾ ಕಪೂರ್, ದೀಪಿಕಾ ಪಡುಕೋಣೆ ದಂಪತಿ ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಅರ್ಜುನ್-ಮಲೈಕಾ ಅರೋರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಮದುವೆ ವಿಚಾರವಾಗಿ ಗೌಪ್ಯತೆ ಕಾಪಾಡುವಂತೆ ಆಪ್ತರಿಗೆ ಮನವಿ ಮಾಡಿದ್ದಾರಂತೆ.

ಫ್ರೆಶ್ ನ್ಯೂಸ್

Latest Posts

Featured Videos