ಸುಕನ್ಯಾ ಯೋಜನೆ ಬಳಸಿಕೊಳ್ಳಿ

ಸುಕನ್ಯಾ ಯೋಜನೆ ಬಳಸಿಕೊಳ್ಳಿ

ಪೀಣ್ಯ: ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ದಿ ಯೋಜನೆಯನ್ನು ಫಲಾನುಭವಿಗಳು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಶೆಟ್ಟಿಹಳ್ಳಿ ಸುರೇಶ್ ಹೇಳಿದರು
ಮಾಜಿ ಶಾಸಕ ಎಸ್.ಮುನಿರಾಜುರವರ ಮಾರ್ಗದರ್ಶನದಲ್ಲಿ ೧೦ ವರ್ಷ ಒಳಪಟ್ಟ ೧೫ ಹೆಣ್ಣು ಮಕಳನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ನೋಂದಾಯಿಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೆ ವೇಳೆ ಚಾಲನೆ ನೀಡಿ ಮಾತನಾಡಿದ ಶೆಟ್ಟಿಹಳ್ಳಿ ಸುರೇಶ್ ಕೇಂದ್ರ ಸರ್ಕಾರದ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಬಹಳಷ್ಟು ಒತ್ತು ನೀಡಿದೆ, ಪೋಷಣಾ ಅಭಿಯಾನ, ಆಯುಷ್ಮಾನ್ ಭಾರತ್, ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಜನಸ್ನೇಹಿ ಆಡಳಿತ ರೂಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲ ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ವಿನೋದ್ ಗೌಡ ,ಹಿರಿಯ ಮುಂಖಂಡ ಕೃಷ್ಣಕುಮಾರ್, ಮುಂತಾದವರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos