ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ

ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ

ಜಮ್ಮುಕಾಶ್ಮೀರ, ಮಾ. 26, ನ್ಯೂಸ್ ಎಕ್ಸ್ ಪ್ರೆಸ್: ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮುಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ. ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿಯಾಗಿ ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳಾ ಮುಖ್ಯಮಂತ್ರಿಗಳಲ್ಲಿ ಮೆಹಬೂಬಾ ಮಫ್ತಿ 2ನೆಯವರು.

ಮೇ 22, 1959 ರಂದು ಜನಿಸಿದ ಮೆಹಬೂಬಾ ಮಫ್ತಿ ಅವರಿಗೆ 59 ವರ್ಷ. ತಂದೆ ಮಫ್ತಿ ಮೊಹಮ್ಮದ್ ಸಯೀದ್. ಶಾಸಕರಾಗಿ, ಸಂಸದರಾಗಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಮೆಹಬೂಬಾ ಮಫ್ತಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಅಧ್ಯಕ್ಷೆಯಾಗಿರುವ ಮೆಹಬೂಬಾ ಮಫ್ತಿ ಅನಂತನಾಗ್ ಕ್ಷೇತ್ರದಿಂದ 16ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 2004 ರಿಂದ 2009ರ ತನಕ ಲೋಕಸಭಾ ಸದಸ್ಯರಾಗಿದ್ದರು. 2009ರ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಿರಲಿಲ್ಲ. 1996ರಲ್ಲಿ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆದಾಗ ಮೆಹಬೂಬಾ ಮಫ್ತಿ ಅವರು ಪ್ರಮುಖ ಅಭ್ಯರ್ಥಿಯಾಗಿದ್ದರು. ಬಿಜವಾರ ಕ್ಷೇತ್ರದಿಂದ ಅವರು ಕಾಂಗ್ರೆಸ್ ಟಿಕೆಟ್ ಮೂಲಕ ಗೆದ್ದು ಬಂದಿದ್ದರು.

ಜಮ್ಮು ಮತ್ತು ಕಾಶ್ಮೀರದಿಂದ ಬಂದು ದೇಶಾದ್ಯಂತ ಪರಿಚಿತರಾದ ಕೆಲವು ರಾಜಕಾರಣಿಗಳಲ್ಲಿ ಮೆಹಬೂಬಾ ಮಫ್ತಿ ಅವರು ಒಬ್ಬರು. 1999ರಲ್ಲಿ ಮಫ್ತಿ ಮೊಹಮ್ಮದ್ ಸಯೀದ್ ಕಾಂಗ್ರೆಸ್ನಿಂದ ಹೊರಬಂದು ಪಿಡಿಪಿ ಪಕ್ಷ ಸ್ಥಾಪನೆ ಮಾಡಿದರು. ಆಗ ಮೆಹಬೂಬಾ ಮಫ್ತಿ ಅವರು ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

2016ರಲ್ಲಿ ಮಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದ ಬಳಿಕ ಪಿಡಿಪಿಯನ್ನು ಮುನ್ನಡೆಸುವ ಹೊಣೆಯನ್ನು ಮೆಹಬೂಬಾ ಮಫ್ತಿ ಹೊತ್ತುಕೊಂಡರು. ಬಿಜೆಪಿ ಬೆಂಬಲ ಪಡೆದು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವನ್ನು ರಚನೆ ಮಾಡಿದರು, ಮುಖ್ಯಮಂತ್ರಿಯಾದರು. 2016ರ ಜೂನ್ 25ರಂದು ನಡೆದ ಅನಂತನಾಗ್ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಶ್ಮೀರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಇವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos