ಮಾದಕ ವಸ್ತು ಗಾಂಜಾ ಮಾರಾಟಗಾರನ ಬಂಧನ

ಮಾದಕ ವಸ್ತು ಗಾಂಜಾ ಮಾರಾಟಗಾರನ ಬಂಧನ

ಬೆಂಗಳೂರು, ಜು. 17: ನೆನ್ನೆ ಬೆಂಗಳೂರು ನಗರದ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಬಿ.ಟಿ.ಎಂ. ಲೇಔಟ್, ನ್ಯೂ ಗುರಪ್ಪನಪಾಳ್ಯ, 10 ನೇ ಮೈನ್, 1ನೇ ಕ್ರಾಸ್ನಲ್ಲಿರುವ ಮನೆ ನಂ 6 ರ 1ನೇ ಮಹಡಿಯ ಮನೆಯಲ್ಲಿ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುತ್ತಾನೆ ಎಂಬ ಮಾಹಿತಿ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಮಹಿಳೆ ಮತ್ತು ಮಾಧಕ ದ್ರವ್ಯ ದಳದ ಅಧಿಕಾರಿಗಳಿಗೆ ಬಂದಿಂತ್ತು. ಈ ಮಾಹಿತಿಯಾಧಾರದ ಮೇಲೆ ಕಾರ್ಯಪ್ರವೃತ್ತರಾದ ಸಿಸಿಬಿ ಅಧಿಕಾರಿಗಳು ಮೇಲ್ಕಂಡ ಸ್ಥಳದ ಮೇಲೆ ದಾಳಿ ನಡೆಸಿ, ಅಲ್ಲಿ ಈ ಮಾದಕ ವಸ್ತುವನ್ನು ಮಾರಾಟ ಮಾಡಲು ಇಟ್ಟುಕೊಂಡಿದ ಕೆಳಕಂಡ ಆಸಾಮಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಫೈರೋಜ್ ಪಾಷಾ ಬಿನ್ ಲೇಟ್ ಮೆಹಬೂಬ್ ಪಾಷಾ 28 ವರ್ಷದ ಇವನಿಂದ  1 ಕೆ.ಜಿ 250 ಗ್ರಾಂ ತೂಕದ ಗಾಂಜಾ, ಮೊಬೈಲ್ ಫೋನ್ ಮತ್ತು ನಗದು ರೂ. 10000/- ಅನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಇದರ  ಮೌಲ್ಯ 50000/- ಸಾವಿರ ರೂಗಳೆಂದು ಅಂದಾಜಿಸಲಾಗಿದೆ.

ಈ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪರಿಚಿತ ಗ್ರಾಹಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದು, ಇದುವರೆಗಿನ ವಿಚಾರಣೆಯಿಂದ ತಿಳಿದುಬಂದಿದೆ.   ಈ ಸಂಬಂಧ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.

ಈ ಕಾರ್ಯಾಚರಣೆಯನ್ನು ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಅಪರಾಧ ರವರಾದ ಡಾ!! ಬಿ.ಆರ್.ರವಿಕಾಂತೇಗೌಡ, ಐಪಿಎಸ್ ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು, ಅಪರಾಧ ರವರಾದ ಶ್ರೀ.ಗಿರೀಶ್.ಎಸ್  ರವರ ಮಾರ್ಗದರ್ಶನದಲ್ಲಿ, ಸಿಸಿಬಿ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಬಿ.ಎಸ್.ಮೋಹನ್ಕುಮಾರ್ ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ. ನಾರಾಯಣಗೌಡ ಹಾಗೂ ಸಿಬ್ಬಂದಿಗಳಾದ ಶ್ರೀ ಸಿದ್ದರಾಜು, ಶ್ರೀ ಪ್ರಕಾಶ್, ಶ್ರೀ ವಿನಯ್, ಶ್ರೀ ಶಶಿಧರ್, ನಂದೀಶ್ ಮತ್ತು ನಿಲೇಶ್ ರವರುಗಳ ತಂಡ ಕೈಗೊಂಡಿರುತ್ತಾರೆ.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos