ಅನಗತ್ಯ ಹಸ್ತಕ್ಷೇಪ ಲೆ. ಗವರ್ನರ್ ಕಿರಣ್ ಬೇಡಿಗೆ ಹೈಕೋರ್ಟ್ ತಪರಾಕಿ!

ಅನಗತ್ಯ ಹಸ್ತಕ್ಷೇಪ ಲೆ. ಗವರ್ನರ್ ಕಿರಣ್ ಬೇಡಿಗೆ ಹೈಕೋರ್ಟ್ ತಪರಾಕಿ!

ಚೆನ್ನೈ, ಏ. 30, ನ್ಯೂಸ್ ಎಕ್ಸ್ ಪ್ರೆಸ್:  ಸರ್ಕಾರದ ಕಾರ್ಯ ಕಲಾಪದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಪುದುಚೇರಿ ಲೆ. ಗರ್ವನರ್ ಕಿರಣ್ ಬೇಡಿ ಅವರಿಗೆ ಮದ್ರಾಸ್ ಹೈಕೋರ್ಟ್ ತಪರಾಕಿ ನೀಡಿದೆ. ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುದುಚೇರಿ ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣನ್, ಲೆ.ಗರ್ವನರ್ ಕಿರಣ್ ಬೇಡಿ ವಿರುದ್ಧ 2017ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಆಡಳಿತದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಲು ಲೆ. ಗರ್ವನರ್ ಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಈ ಕೂಡಲೇ ಹಸ್ತಕ್ಷೇಪ ನಿಲ್ಲಿಸುವಂತೆ ಸೂಚನೆ ನೀಡಿದೆ. ಇನ್ನು ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಪುದುಚೇರಿ ಸಿಎಂ ವಿ.ನಾರಾಯಣ್ ಸ್ವಾಮಿ, ಇದು ಸಂವಿಧಾನ ಉಳಿಸಲು ಸರ್ಕಾರ ನಡೆಸಿದ ಹೋರಾಟಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos