ಅವೈಜ್ಞಾನಿಕ ಕಾಮಗಾರಿಯಿಂದ ನಷ್ಟ

  • In State
  • December 15, 2020
  • 166 Views
ಅವೈಜ್ಞಾನಿಕ ಕಾಮಗಾರಿಯಿಂದ ನಷ್ಟ

ಪಿರಿಯಾಪಟ್ಟಣ: ಅವೈಜ್ಞಾನಿಕ ಕಾಮಗಾರಿಯಿಂದ ಪುರಸಭೆ ಜನತೆಗೆ ಮತ್ತು ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್ ಆರೋಪಿಸಿದರು.
ಪಟ್ಟಣದಲ್ಲಿರುವ ಕೆ ಎಚ್ ಬಿ ಕಾಲೋನಿ ಯಿಂದ ಗೋಣಿಕೊಪ್ಪ ಮತ್ತು ಪಿರಿಯಾಪಟ್ಟಣ ಬಸವೇಶ್ವರ ವೃತ್ತದ ಮುಖ್ಯರಸ್ತೆ ಬದಿಯಲ್ಲಿ ನೀರು ಹರಿದು ಬರಲು ಹಾಯ್ದು ಬಂದಿರುವ ಚರಂಡಿ ನಿರ್ಮಾಣ ಬಾರಿ ಅವೈಜ್ಞಾನಿಕವಾಗಿರುವದರಿಂದ ನೀರು ಹರಿಯದೆ ಒಂದೆಡೆ ಸಂಗ್ರಹವಾಗಿ ಬಾರಿ ತೊಂದರೆಯಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದರಿಂದ ಮಳೆ ನೀರು ಸೇರಿದಂತೆ ಇನ್ನಿತರ ನೀರು ಸಂಗ್ರಹವಾಗಿ ಕೊಳೆತು ನಾರುತ್ತಿದೆ ಇದರಿಂದ ಪುರಸಭಾ ವ್ಯಾಪ್ತಿಯ ಜನತೆಗೆ ಹಾಗೂ ಪುರಸಭೆಯ ಬೊಕ್ಕಸಕ್ಕೆ ಇದನ್ನು ತೆರವುಗೊಳಿಸಲು ನಷ್ಟವಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆದ್ದರಿಂದ ಪಿರಿಯಪಟ್ಟಣ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಿ ಈ ಹಿಂದೆ ನಡೆದಿರುವ ಅವೈಜ್ಞಾನಿಕ ಚರಂಡಿಯನ್ನು ಸರಿಪಡಿಸಿ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಜನರಿಗೆ ತೊಂದರೆಯಾಗದಂತೆ ಪುರಸಭೆ ಅಧಿಕಾರಿಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos