ಬಹುದಿನಗಳ ಕನಸು ನನಸಾಗಿದೆ

  • In State
  • August 17, 2020
  • 32 Views
ಬಹುದಿನಗಳ ಕನಸು ನನಸಾಗಿದೆ

ಪಾವಗಡ :ಪಟ್ಟಣದ ಜನತೆಯ ಬಹುದಿನಗಳ ಕನಸು ನನಸಾಗಿದೆ. ಪಟ್ಟಣಕ್ಕೆ ಶಾಶ್ವತವಾಗಿ ಶುದ್ದ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ಸಲುವಾಗಿ ನಾಗಲಮಡಿಕೆ ಡ್ಯಾಂ ನೀರಿನಿಂದ ಅಗಸರಕುಂಟೆ ತುಂಬಿಸುವುದರಿಂದ ಕುಡಿಯುವ ನೀರಿನ ಜೊತೆ ಅಂತರ್ಜಲವು ವೃದ್ದಿಯಾಗಲಿದೆ ಎಂದು ಶಾಸಕ  ವೆಂಕಟರಮಣಪ್ಪ ನುಡಿದರು.

ಉತ್ತರ ಪಿನಾಕಿನಿ ನಾಗಲಮಡಿಕೆ ಡ್ಯಾಂನಿಂದ ಪಾವಗಡಕ್ಕೆ ಕುಡಿಯುವ ನೀರು 50 ಲಕ್ಷ ಲೀ ಸಾಮರ್ಥ್ಯದ ಪಾವಗಡದ ಒವರ್ ಹೆಡ್ ಟ್ಯಾಂಕ್ ಮತ್ತು ಅಗಸರ ಕುಂಟೆಗೆ ಕೃಷ್ಣಾ ನದಿ ನೀರು ಸರಬರಾಜು ಆಗಿದ್ದು ಪಟ್ಟಣದ ಎಲ್ಲಾ ವಾರ್ಡುಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು

ಪುರಸಭೆ ನಿಧಿಯಿಂದ 60 ಲಕ್ಷ ಮೊತ್ತದಲ್ಲಿ ಹೊಸ  ಪೈಪ್ ಲೈನ್ ಮತ್ತು ದುರಸ್ತಿ  ಕೈಗೊಳ್ಳುವುದಾಗಿ ತಿಳಿಸಿದರು. ಇದರಿಂದ  ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ಶೇಖರಣೆಗೊಂಡು, ಕುಡಿಯುವ ನೀರನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.

.

 

 

ಫ್ರೆಶ್ ನ್ಯೂಸ್

Latest Posts

Featured Videos