ವೃತ್ತಿಪರ ಮಹಿಳೆಯರು ‘ಆರೈಕೆ’ಗೆ ನೀಡಿ ಸಮಯ

ವೃತ್ತಿಪರ ಮಹಿಳೆಯರು ‘ಆರೈಕೆ’ಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ.

ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು ಬಿಟ್ಟಿದ್ದಾರೆ. ಈ ನಿರ್ಲಕ್ಷ್ಯ ಮಹಿಳೆಯರು ಅನೇಕ ಸಮಸ್ಯೆ ಎದುರಿಸುವಂತೆ ಮಾಡಿದೆ. ಕೆಲಸದ ಮಧ್ಯೆ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಮಯ ನೀಡುವ ಅಗತ್ಯವಿದೆ.

ಒಣ ಹಣ್ಣುಗಳ ಸೇವನೆ ಬಹಳ ಒಳ್ಳೆಯದು. ಇದ್ರ ಸೇವನೆಯಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶ ಸಿಗುತ್ತದೆ. ನಮ್ಮ ದೇಹ ಸದಾ ಆರೋಗ್ಯದಿಂದ ಕೂಡಿರುತ್ತದೆ.

ಪರ್ಸ್ ನಲ್ಲಿ ಒಣ ಹಣ್ಣುಗಳನ್ನು ಸದಾ ಇಟ್ಟುಕೊಳ್ಳಿ. ಆಗಾಗ ಹಣ್ಣುಗಳನ್ನು ಸೇವನೆ ಮಾಡುತ್ತಿರಿ. ಪ್ರೋಟೀನ್, ಕಬ್ಬಿಣ, ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ದೇಹ ಸೇರಲು ನೆರವಾಗುತ್ತದೆ.

ಮನೆ, ಕಚೇರಿ ಕೆಲಸ ದೇಹ ದಣಿಯಲು ಕಾರಣವಾಗುತ್ತದೆ. ಸಂಜೆಯಾಗ್ತಿದ್ದಂತೆ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಹಾಗಾಗಿ ಪ್ರತಿ ದಿನ ಒಂದು ಗ್ಲಾಸ್ ಹಣ್ಣಿನ ರಸವನ್ನು ಮರೆಯದೆ ತೆಗೆದುಕೊಳ್ಳಿ. ಇದು ದಣಿವನ್ನು ಕಡಿಮೆ ಮಾಡಿ, ದೇಹಕ್ಕೆ ಚೈತನ್ಯ ತುಂಬುತ್ತದೆ.

ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಜಂಕ್ ಫುಡ್ ಬದಲು ಬಹು ಧಾನ್ಯದ ಬಿಸ್ಕಿಟ್ ಸೇವನೆ ಮಾಡಿ. ಇದು ಚಯಾಪಚಯವನ್ನು ಸರಿ ಮಾಡುತ್ತದೆ. ದೇಹ ಆರೋಗ್ಯವಾಗಿರಲು ನೆರವಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos