ಶುಲ್ಲಕ ಕಾರಣಕ್ಕೆ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

ಶುಲ್ಲಕ ಕಾರಣಕ್ಕೆ ಎತ್ತುಗಳ ಕಾಲು ಕತ್ತರಿಸಿದ ಟಿಬೆಟಿಯನ್ನರು!

ಚಾಮರಾಜನಗರ: ಜಮೀನಿಗೆ ನುಗ್ಗಿ ಜೋಳದ ಬೆಳೆ ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಹನೂರು ತಾಲೂಕಿನ ಒಡೆಯರ್ ಪಾಳ್ಯದ ಟಿಬೆಟಿಯನ್ ಕ್ಯಾಂಪಿನಲ್ಲಿ ನಡೆದಿದೆ.

ಆಹಾರ ಅರಸಿ ದನಕರುಗಳು ಜಮೀನಿಗೆ ಬಂದು ಜೋಳವನ್ನು ಮೇಯಲು ಆರಂಭಿಸಿವೆ. ಇದನ್ನು ನೋಡಿದ ಟಿಬೆಟಿಯನ್ ರೈತ ಸಿಟು ಅಲಿಯಾಸ್ ಕಿಟುಪ್ ಎಂಬಾತ ಏಕಾಏಕಿ ಬಂದು ದನಕರುಗಳ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ.

ದಿ ವಿಲೇಜ್‌ನಲ್ಲಿ ಟಿಬೆಟಿಯನ್ನರು ವ್ಯವಸಾಯ ಮಾಡಿಕೊಂಡು ವಾಸವಿದ್ದಾರೆ. ಜೋಳದ ಫಸಲನ್ನು ನಾಶ ಮಾಡಿವೆ ಎಂಬ ಕಾರಣಕ್ಕೆ ಮೂವರು ಟಿಬೆಟಿಯನ್ನರು ಈ ಕೃತ್ಯವನ್ನು ಎಸಗಿದ್ದಾರೆ. ಗಡಿ ಜಿಲ್ಲೆ ರೈತರ ಮೇಲೆ ದರ್ಪ ಮೆರೆಯುತ್ತಿರುವ ಟಿಬೆಟಿಯನ್ನರು, 15ಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ, ಕೊಂಬುಗಳನ್ನು ಕತ್ತರಿಸಿದ್ದಾರೆ. ಇದರಿಂದಾಗಿ ಎತ್ತುಗಳು ಬದುಕಿದ್ದು ಸತ್ತಂತೆ ಆಗಿವೆ.

ಇತ್ತ ಎತ್ತುಗಳ ಸ್ಥಿತಿ ಕಂಡು ರೈತ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರ ಮೇಲೆ ಟಿಬೆಟಿಯನ್‌ರ ದರ್ಪಕ್ಕೆ ಕಿಡಿಕಾರಿದ್ದಾರೆ. ಕೃಷಿಗೆ ಈ ಎತ್ತುಗಳೇ ಆಧಾರವಾಗಿದ್ದವು. ಮನೆ ಮಕ್ಕಳಂತೆ ಜೋಪಾನ ಮಾಡಿದ್ದ ಎತ್ತುಗಳ ಕಾಲುಗಳನ್ನು ಕತ್ತರಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos