ಡಾ.ಚೆನ್ನಣ್ಣ ಪಂಚಭೂತಗಳಲ್ಲಿ ಲೀನ

ಡಾ.ಚೆನ್ನಣ್ಣ ಪಂಚಭೂತಗಳಲ್ಲಿ ಲೀನ

ಕಲಬುರಗಿ,ನ. 25 : ನಿಧನರಾದ ಹಿರಿಯ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ (78) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶಹಾಬಾದ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿಂದು ನೆರವೇರಿಸಲಾಯಿತು.
ಅವರ ಕುಟುಂಬವರ್ಗದವರು, ಸಾಹಿತಿಗಳು, ಗಣ್ಯರು ಮತ್ತು ಅವರ ಶಿಷ್ಯಬಳಗ ಹಾಗೂ ಅಭಿಮಾನಿಗಳು ಸೇರಿದಂತೆ ಅಪಾರ ಜನ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ನಗರದ ಹಿಂದಿ ಪ್ರಚಾರಸಭಾ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಸಾಹಿತಿಗಳು, ಗಣ್ಯರು ಅಂತಿಮ ದರ್ಶನ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಪ್ರಗತಿಪರ, ನವ್ಯ, ದಲಿತ, ಬಂಡಾಯ, ಸಮುದಾಯ, ಗಜಲ್, ಸಾನೆಟ್ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದ ಡಾ.ಚೆನ್ನಣ್ಣ ವಾಲೀಕಾರ ಅವರು, ವ್ಯೋಮ್ಯಾ ವ್ಯೋಮಾ, ಸುನೀತಂಗಳ ಸುಕಾವ್ಯಾಮೃತ, ಸುನೀತಂಗಳ ಸುದಿವ್ಯಾಮೃತ, ಬೌದ್ಧತ್ವದ ಮಹಾ ಬ್ರಹ್ಮಾಂಡಮೃತ ಎಂಬ ಮಹಾಕಾವ್ಯ, ಮರದ ನೀರಿನ ಗಾಳಿ, ಕಲಿತೆಲಿ ಮಾನವನ ಜೀಪದ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ಪದ್ಯಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು, ಧಿಕ್ಕಾರದ ಹಾಡುಗಳು, ಐದು ಸಮಾಜವಾದಿ ಕಾವ್ಯಗಳು, ವಾಲೀಕಾರ ಚೆನ್ನಣ್ಣನ ಮುನ್ನೂರು ಮೂರು ವಚನಗಳು, ವೈರಿಗಳ ಮಧ್ಯೆ ಎದ್ದಕಗ್ಗತ್ತಲೆ ಖಂಡದ ಕಾವ್ಯ, ಆಯ್ದ ಕವನಗಳು, ಉರ್ದು ಕವಿತೆ (ಅನುವಾದ)ಗಳನ್ನು ರಚಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos