ರಾಯಚೂರಿನಲ್ಲಿ ವಕೀಲನ ಮೇಲೆ ಪೊಲೀಸರ ದೌರ್ಜನ್ಯ ಆರೋಪ

ರಾಯಚೂರಿನಲ್ಲಿ ವಕೀಲನ ಮೇಲೆ ಪೊಲೀಸರ ದೌರ್ಜನ್ಯ ಆರೋಪ

ರಾಯಚೂರು, ಏ. 24, ನ್ಯೂಸ್ ಎಕ್ಸ್ ಪ್ರೆಸ್: ರಾಯಚೂರಲ್ಲಿ ನ್ಯಾಯವಾದಿ ಜೊತೆ ಪೊಲೀಸರು ಅನುಚಿತ ವರ್ತನೆ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಗರದ ಸ್ಟೇಷನ್ ಸರ್ಕಲ್ ಹೋಟೆಲ್‌ವೊಂದರ ಬಳಿ ಅನುಚಿತವಾಗಿ ವರ್ತನೆ ತೋರಿದ್ದಾರೆ ಎನ್ನುವ ಆರೋಪದ ಮೇಲೆ ಯುವ ವಕೀಲ ವೀರಯ್ಯಸ್ವಾಮಿ ಎಂಬುವರನ್ನ ಬಂಧಿಸಿ ಬಳಿಕ ಬಿಡುಗಡೆ ಮಾಡಿರುವ ಘಟನೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಜರುಗಿದೆ. ವಕೀಲನನ್ನು ಬಂಧಿಸಿ ಕೈಗೆ ಬೇಡಿ ಹಾಕಿ ನಿಲ್ಲಿಸಿದ್ದ ಫೋಟೋ ಈಗ ವೈರಲ್ ಆಗಿದ್ದು, ಇದಕ್ಕೆ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ವಕೀಲರ ಸಂಘದಿಂದ ಸಭೆ ನಡೆಸಲಾಗಿದ್ದು, ಪೊಲೀಸರ ನಡೆ ಖಂಡಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಶ್ನಿಸಲಾಗಿದ್ದು, ಮಧ್ಯರಾತ್ರಿ ವೇಳೆ ಅನುಮಾನಸ್ಪದವಾಗಿ ವೀರಸ್ವಾಮಿ ಓಡಾಡುತ್ತಿದ್ದರು. ಅದಕ್ಕಾಗಿ ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos