ನೀರಿನ ಟ್ಯಾಂಕರ್ ನೊಂದಣಿಗೆ ಇಂದು ಕೊನೆ ದಿನ!

ನೀರಿನ ಟ್ಯಾಂಕರ್ ನೊಂದಣಿಗೆ ಇಂದು ಕೊನೆ ದಿನ!

ಬೆಂಗಳೂರು: ಉದ್ಯಾನ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನವರಿಯಿಂದಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾವೇರಿ ನೀರು ಸಾಕಾಗುತ್ತಿಲ್ಲ. ಬೋರ್ ವೆಲ್​​​ಗಳು ಬತ್ತಿ ಹೋಗಿವೆ.

ಬಿಬಿಎಂಪಿ ಪೋರ್ಟಲ್ ನಲ್ಲಿ ನೀರಿನ ಟ್ಯಾಂಕರ್ ನೊಂದಣಿಗೆ ಇಂದು ಕೊನೆಯ ದಿನವಾಗಿದೆ ಇದುವರೆಗೆ ನೋಂದಣಿ ಮಾಡದ ಮಾಲೀಕರಿಗೆ ಇದು ಕೊನೆಯ ಅವಕಾಶವಾಗಿದೆ.

ಮಾರ್ಚ್ 15ರ ಒಳಗೆ ನೀರಿನ ಟ್ಯಾಂಕರ್ ನೋಂದಣಿ ಮಾಡಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುತ್ತೇವೆ ನೊಂದಣಿ ಮಾಡಿಕೊಂಡ ಟ್ಯಾಂಕರ್ ಗಳಿಗೆ ಬಿಬಿಎಂಪಿಯ ಸ್ಟಿಕರ್ ಆಂಟಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ ಹಾಗೂ ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ ವಿಧಿಸಲಾಗುವುದಾಗಿ ಆದೇಶಿಸಲಾಗಿದೆ.

ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡು ಬಂದರೆ ನಾಳೆಯಿಂದ ಸ್ಥಳದಲ್ಲಿ ದಂಡ ವಿಧಿಸಲಾಗುತ್ತದೆ ಇದಕ್ಕಾಗಿ ಪ್ರತ್ಯೇಕ ಸ್ಥಳ ದಂಡ ಶುಲ್ಕದ ನಮೂದನೆಯನ್ನು ಸಿದ್ಧಪಡಿಸಲಾಗಿದೆ ಸಾರ್ವಜನಿಕರು 1916 ಸಹಾಯವಾಣಿಗೆ ಕರೆ ಮಾಡಿ ನೀರಿನ ದುರ್ಬಳಕೆಯ ಬಗ್ಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos