ಲಾರಾ ದಾಖಲೆ ಮುರಿದ ಮಾಸ್ಟರ್ ಬ್ಲಾಸ್ಟರ್

ಲಾರಾ ದಾಖಲೆ ಮುರಿದ ಮಾಸ್ಟರ್ ಬ್ಲಾಸ್ಟರ್

ನವದೆಹಲಿ, ಅ.17 : 11 ವರ್ಷಗಳ ಹಿಂದೆ ಅಂದಿನ ಇದೇ ದಿನದಂದು (2008, ಅ. 17) ವೆಸ್ಟ್ಇಂಡೀಸ್ನ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರ್ಯಾನ್ ಲಾರಾ ದಾಖಲೆಯನ್ನು ಮುರಿದ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಭಾಜನವಾಗಿದ್ದರು.
ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ಈ ಐತಿಹಾಸಿಕ ಸಾಧನೆ ಮಾಡಿದ್ದರು. ಇದೇ ಸರಣಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಸೌರವ್ ಗಂಗೂಲಿ ನಿವೃತ್ತಿ ಘೋಷಿರುವುದು ಗಮನಾರ್ಹ.ಕಿಂಗ್ ಕೊಹ್ಲಿ ಬೆಸ್ಟ್ ಬ್ಯಾಟ್ಸ್ಮನ್-ಕ್ಯಾಪ್ಟನ್ ಎಂಬುದಕ್ಕೆ ಅಂಕಿಅಂಶಗಳೇ ಸಾಕ್ಷಿ! ಬ್ರ್ಯಾನ್ ಲಾರಾ ಹೆಸರಲ್ಲಿದ್ದ 11,953 ರನ್ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಮುರಿದಿದ್ದರು. ತಮ್ಮ 152ನೇ ಟೆಸ್ಟ್ ಪಂದ್ಯದ 247ನೇ ಇನ್ನಿಂಗ್ಸ್ನಲ್ಲಿ 54.10ರ ಸರಾಸರಿಯಲ್ಲಿ ಈ ದಾಖಲೆಯನ್ನು ಸಚಿನ್ ಕ್ರಮಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos