ಕೂದಲು ದಾನ ಮಾಡುವ ಅಭಿಯಾನ

ಕೂದಲು ದಾನ ಮಾಡುವ ಅಭಿಯಾನ

ಬೆಂಗಳೂರು, ಜು. 15: ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವ ಕ್ಯಾನ್ಸರ್ ಪೀಡಿತ ಬಡ ಮಕ್ಕಳು ಮಹಿಳೆಯರಿಗೆ ಅತ್ಮ ವಿಶ್ವಾಸ ತುಂಬಿಸುವ ಸಲುವಾಗಿ ಉಚಿತವಾಗಿ ವಿಗ್ ಗಳನ್ನು ನೀಡಲು ಅರೋಗ್ಯ ಸೇವಾ ಸಂಸ್ಥೆಯು ಗೇಟ್  ಎ ಶೇರ್ ಕಟ್ ! ಗಿಪ್ಟ್ ಎ ವಿಗ್ ಎಂಬ ಹೆಸರಿನಲ್ಲಿ

ಕೂದಲು ದಾನ ಮಾಡುವ ಅಭಿಯಾನ ವನ್ನು ಪ್ರಾರಂಭಿಸಿದೆ.

ಟೋನಿ ಮತ್ತು ಗೈ, ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ಅಭಿಯಾನಕ್ಕೆ ಮಹದೇವಪುರ ಸಮೀಪವಿರುವ ಫೀನಿಕ್ಸ್ ಮೇಲ್ ಚಾಲನೆ ನೀಡಲಾಯಿತು.

ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸೇವಾ   ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ದಯಾ ಪ್ರಸಾದ್ ಕುಲಕರ್ಣಿ ಕೂದಲು ಉದುರುವುದು ಕ್ಯಾನ್ಸರ್ ಚಿಕಿತ್ಸೆಯ ಸಾಮಾನ್ಯ ಅಡ್ಡ ಪರಿಣಾಮಗಳಲ್ಲಿ ಒಂದಾಗಿದೆ. ಕೂದಲು ಉದುರುವುದ್ದರಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುತ್ತದೆ. ಅಲ್ಲದೆ ಸ್ವಾಭಿಮಾನ ಮತ್ತು ದೇಹದ ಚಿತ್ರಣದ ಮೇಲೆ  ತೀವ್ರ ವಾದ ಪರಿಣಾಮ ಬೀರುತ್ತದೆ.

ಮೊದಲೆ ಕ್ಯಾನ್ಸರ್ ನಿಂದ ಕಂಗೆಟ್ಟಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೂದಲು ಉದುರುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.  ಇವರಿಗೆ ಆತ್ಮವಿಶ್ವಾಸ ಹೆಚ್ಚಿಸಲು ಗೇಟ್  ಎ ಶೇರ್ ಕಟ್ ! ಗಿಪ್ಟ್ ಎ ವಿಗ್ ಎಂಬ ಹೆಸರಿನಲ್ಲಿ ಕೂದಲು ದಾನ ಮಾಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ದಾನ ಮಾಡಿದ ಕೂದಲನ್ನು  ಕೀಮೋಥೆರಪಿ-ಪ್ರೇರಿತ ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಬಡ ಮಹಿಳೆಯರು ಮತ್ತು ಮಕ್ಕಳಿಗೆ ವಿಗ್ ತಯಾರಿಸಲು ಬಳಸಲಾಗುತ್ತದೆ ಮತ್ತು ಅವರಿಗೆ ಉಚಿತವಾಗಿ ನೀಡಲಾಗುತ್ತದೆ. ಕಿದ್ವಾಯ್‌ನಂತಹ ಸರ್ಕಾರಿ ಆಸ್ಪತ್ರೆಗಳ ಮೂಲಕ  ಗುರುತಿಸಲಾಗುತ್ತದೆ.

 

ಕೂದಲು ದಾನ ಮಾಡುವ ಅಭಿಯಾನವು

೨ ವಾರಗಳವರೆಗೆ ( ಜುಲೈ 14 – 31) ನಡೆಯುತ್ತದೆ, ಈ ಅವಧಿಯಲ್ಲಿ ತಮ್ಮ ಕೂದಲನ್ನು ದಾನ ಮಾಡಲು ಇಚ್ಚಿಸುವವರು ಟೋನಿ ಮತ್ತು ಗೈ ಸಲೂನನ್ನು ಸಂಪರ್ಕಿಸ ಬಹುದು.

ಸಾಮಾನ್ಯವಾಗಿ ವಿಗ್‌ಗಳು 6,000 ರೂ. ಗಿಂತ ಹೆಚ್ಚಿನ ವೆಚ್ಚವನ್ನು ಹೊಂದಿದ್ದು, ಅವುಗಳನ್ನು ಗೇಟ್ ಎ ಶೇರ್‌ಕಟ್! ಗಿಪ್ಟ್ ಎ ವಿಗ್ ಅಭಿಯಾನದ ಮೂಲಕ ಬೆಂಗಳೂರಿನ ಕೀಮೋಥೆರಪಿ-ಪ್ರೇರಿತ ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ  ಉಚಿತವಾಗಿ ನೀಡಲು ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.

ಅಮೆರಿಕದ ಮೂಲದ ಡಾ. ಸೀನ್ ಹೆಸ್ಲರ್ ಮತ್ತು ಡಾ. ಸಾರಾ ಹೆಸ್ಲರ್ ಮತ್ತಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos