ಕ್ಷಯ ರೋಗದ ಕುರಿತು ಜಾಗೃತಿ ಜಾಥ

ಕ್ಷಯ ರೋಗದ ಕುರಿತು ಜಾಗೃತಿ ಜಾಥ

ಕೆ.ಆರ್.ಪುರ, ಜು. 15 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ಷಯ ರೋಗದ ಕುರಿತು ಕೆ.ಆರ್.ಪುರದಲ್ಲಿ ಜನ ಜಾಗೃತಿ ಜಾಥ ನಡೆಸಲಾಯಿತು.

ಇಂದು ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತಾನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಅವರು ಕ್ಷಯರೋಗದ ಕುರಿತು ಜಾಗೃತಿ ಅಗತ್ಯ, ಕ್ಷಯರೋಗಕ್ಕೆ ಚಿಕಿತ್ಸೆಯಿದ್ದು,  ಆತಂಕ ಪಡುವ ಅಗತ್ಯವಿಲ್ಲ ಎಂದು ನುಡಿದರು.

ನಿರಂತರ ಚಿಕಿತ್ಸೆಯಿಂದ ಕ್ಷಯರೋಗ ಸಂಪೂರ್ಣ ಗುಣಮುಖ ವಾಗುತ್ತದೆ, ಕ್ಷಯರೋಗದ ಖಚಿತತೆಯಾದ ನಂತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಕ್ಷಯರೋಗವನ್ನು ಹಂತಹಂತವಾಗಿ ಗುಣಪಡಿಸಬಹುದು ಹಾಗೂ ಸರ್ಕಾರದ ವತಿಯಿಂದ ಕಡಿಮೆದರದಲ್ಲಿ  ಔಷದಿಗಳು ಲಭ್ಯವಿದೆ ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.

ಪ್ರಸ್ತುತ ಬೆಂಗಳೂರು ಪೂರ್ವ ತಾಲೂಕಿನಲ್ಲಿ 108  ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೆವೆಂದು ತಿಳಿಸಿದರು.

ಹತ್ತು ದಿನಗಳ ಕಾಲ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಮಾಡಲಾಗುತ್ತಿದ್ದು ಅಂಗನವಾಡಿ ಕಾರ್ಯಕರ್ತೆರು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 108 ತಂಡಗಳಿಂದ ಕ್ಷಯರೋಗ ಪತ್ತೆಹಚ್ಚುವುದಲ್ಲದೆ ಅರಿವು ಕಾರ್ಯವನ್ನು ಮಾಡಲಾಗುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾದಿಕಾರಿ ಕಚೇರಿ ಸಿಬ್ಬಂದಿ, ಕ್ಷಯ ರೋಗ ಸಿಬ್ಬಂದಿ, ಆರೋಗ್ಯ ನಿರೀಕ್ಷರಾದ ಶ್ರೀ ಶೈಲ, ಕೇಸವ ಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕ್ಷಯರೋಗದ ಕುರಿತು ಕೆ.ಆರ್.ಪುರದಲ್ಲಿ ಜಾಗೃತಿ ಜಾಥ ನಡೆಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos