1 ವಾರದೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ: ದಿನೇಶ್ ಗುಂಡೂರಾವ್

1 ವಾರದೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ: ದಿನೇಶ್ ಗುಂಡೂರಾವ್

ಮೈಸೂರು, ಜ. 25: ಕೆಪಿಸಿಸಿಯ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ವಾರದೊಳಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಘೋಷಣೆ ಆಗಲಿದೆ ಅಂತಾ ಹೇಳಿದ್ದಾರೆ. ಈ ಸಂಬಂಧ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಮೈಸೂರಿನಲ್ಲಿ ನಿನ್ನೆ ಉತ್ತರಿಸಿದ ಅವರು, ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯವಿರುತ್ತದೆ. ಭಿನ್ನ ಅಭಿಪ್ರಾಯಗಳು, ಅಸಮಾಧಾನ ಎನಿಸಿಕೊಳ್ಳುವುದಿಲ್ಲ. ನಮ್ಮಲ್ಲಿ ಯಾವುದೇ ಬಣಗಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ಹೊಸ ಅಧ್ಯಕ್ಷರನ್ನು ಸ್ವೀಕರಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ ಎಂದು ತಿಳಿಸಿದ ದಿನೇಶ್ ಗುಂಡೂರಾವ್, ನಾಲ್ವರು ಕಾರ್ಯಾಧ್ಯಕ್ಷ ಹುದ್ದೆಗಿರುವ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos