ಕೋಟ್ಯಾಂತರ ಜನರ ನಂಬಿಕೆಯೇ ರಾಮ ಆಯೋಧ್ಯ

ಕೋಟ್ಯಾಂತರ ಜನರ ನಂಬಿಕೆಯೇ ರಾಮ ಆಯೋಧ್ಯ

 ನವದೆಹಲಿ, ಆ. 8 :ರಾಮಜನ್ಮಭೂಮಿ ಪ್ರಕರಣದ ದೈನಂದಿನ ವಿಚಾರಣೆ ಆರಂಭ 2ನೇ ದಿನ ಬುಧವಾರ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಾದ ವಿವಾದ ನಡೆದಿದ್ದು, ಅಯೋಧ್ಯೆಯಲ್ಲೇ ರಾಮ ಜನಿಸಿದ್ದ ಎಂಬುದಕ್ಕೆ ಕೋಟ್ಯಂತರ ಜನರ ನಂಬಿಕೆಯೇ ಸಾಕ್ಷಿ ಎಂದು ರಾಮ್ ಲಲ್ಲಾ ವಿರಾಜಮಾನ್ ಪರ ವಕೀಲ ಕೆ.ಪರಾಶರನ್ ಹೇಳಿದ್ದಾರೆ.
ಹಲವು ಶತಮಾನಗಳ ನಂತರ ರಾಮ ಜನಿಸಿದ ಬಗ್ಗೆ ಸಾಕ್ಷಿ ಕೊಡುವುದು ಹೇಗೆ ಸಾಧ್ಯ. ಜನರ ನಂಬಿಕೆಯೇ ರಾಮ ಇಲ್ಲಿ ಜನಿಸಿದ್ದ ಎಂಬುದಕ್ಕೆ ಸಾಕ್ಷಿ. ವಾಲ್ಮೀಕಿ ರಾಮಾಯಣದಲ್ಲೂ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂಬುದನ್ನು ಉಲ್ಲೇಖೀಸಲಾಗಿದೆ ಎಂದು ಕೆ ಪರಾಶರನ್ ಹೇಳಿದರು. ಈ ಹಿಂದೆ ಕ್ರಿಸ್ತ ಬೆತ್ಲೆಹೆಮ್ನಲ್ಲೇ ಜನಿಸಿದ್ದಾರೆ ಎಂಬುದನ್ನು ಪ್ರಶ್ನಿಸಲಾಗಿತ್ತೇ ಮತ್ತು ವಿಶ್ವದ ಯಾವುದೇ ಕೋರ್ಟ್ನಲ್ಲಿ ಈ ರೀತಿಯ ಪ್ರಕರಣ ನಡೆದಿತ್ತೇ? ಆಗ ಯಾವ ರೀತಿ ಇದನ್ನು ನಿರ್ವಹಿಸಲಾಗಿತ್ತು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.

ಫ್ರೆಶ್ ನ್ಯೂಸ್

Latest Posts

Featured Videos