ಕೊನೆಗೂ ಸಿಕ್ಕಿ ಬಿದ್ದ ರವಿ ಪೂಜಾರಿ

ಕೊನೆಗೂ ಸಿಕ್ಕಿ ಬಿದ್ದ ರವಿ ಪೂಜಾರಿ

ಉಡುಪಿ, ಜೂ. 24: ಮೂಲತಃ ಉಡುಪಿ ಜಿಲ್ಲೆಯ ಕಲ್ಮಾಡಿಯ ರವಿ ಪೂಜಾರಿಯನ್ನು ಬಂಧಿಸಲು ಪೊಲೀಸರು ಹಲವು ವರ್ಷದಿಂದ ಪ್ರಯತ್ನ ಮುಂದುವರಿಸಿದ್ದರು. ಹೌದು, ಮೋಸ್ಟ್ ವಾಂಟೆಡ್ ಪಾತಕಿ ರವಿ ಪೂಜಾರಿ ಇಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಲ್ಲಿ ಅರೆಸ್ಟ್ ಆಗಿದ್ದಾನೆ. ಇದೇ ವೇಳೆ ರವಿ ಪೂಜಾರಿಯ ಬಂಧನದದ ನಂತರ ಕೆಲ ಫೋಟೋಗಳು ವೈರಲ್ ಆಗಿದ್ದು ಬರೋಬ್ಬರಿ 20 ವರುಷಗಳ ನಂತರ ರವಿ ಪೂಜಾರಿ ಹೇಗಿದ್ದಾನೆ ಎನ್ನುವುದನ್ನು ಕಾಣಬಹುದಾಗಿದೆ.

ಈತನ ವಿರುದ್ಧ ಮಂಗಳೂರು ನಗರದಲ್ಲೇ 32ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿಯೂ ಪತ್ತೆ ಸಾಧ್ಯವಾಗಿರಲಿಲ್ಲ. ಸದ್ಯ ಭಾರತಕ್ಕೆ ರವಿ ಪೂಜಾರಿಯನ್ನು ಕರೆ ತರುವುದಕ್ಕೆ ಎಲ್ಲಾ ಪ್ರಕಿಯೆಗಳು ನಡೆಯುತ್ತಿದ್ದು ಇಂಗ್ಲೀಷ್ ಭಾಷೆಯಲ್ಲಿರುವ ಕೆಲ ಮಾಹಿತಿಗಳನ್ನು ಸೆನೆಗಲ್ ಭಾಷೆಗೆ ಭಾಷಾಂತರ ಮಾಡುತ್ತಿದ್ದು ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರಲಾಗುವುದು ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos