ಕೋಳಿ ಜಗಳ: ವೃದ್ದ ಮಹಿಳೆ ಸಾವು

ಕೋಳಿ ಜಗಳ: ವೃದ್ದ ಮಹಿಳೆ ಸಾವು

ನಂಜನಗೂಡುಮೇ. 25, ನ್ಯೂಸ್ಎಕ್ಸ್ ಪ್ರೆಸ್‍:  ತಾಲೂಕಿನ ತಾಯೂರು ಗ್ರಾಮದಲ್ಲಿ ಮಹಿಳೆಯರ ನಡುವೆ ನಡೆದ ಕೋಳಿ ಜಗಳವೊಂದು ತಾರಕಕ್ಕೇರಿ ವೃದ್ಧ ಮಹಿಳೆ ಸಾವಿಗೀಡಾದ ಘಟನೆ ನಡೆದಿದೆ.

ಗ್ರಾಮದ ನಿವಾಸಿ ತಾಯಮ್ಮ(70) ಮೃತಪಟ್ಟ ಮಹಿಳೆ.  ತಮ್ಮ ಮನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ನಾಟಿ ಕೋಳಿ ಮರಿಗಳನ್ನು ಸಾಕಿಕೊಂಡಿದ್ದರು. ಹೀಗೆ ಸಾಕಿರುವ ಕೋಳಿಗಳು ನೆರೆಮನೆಯ ನಿವಾಸಿಗಳಾದ ಸುಬ್ಬಮ್ಮ ಮತ್ತು ದೇವಿಕಾ ಎಂಬುವವರ ಮನೆ ಮುಂಭಾಗ ಗಲೀಜು ಮಾಡುತ್ತವೆ ಎಂಬ ಕಾರಣಕ್ಕೆ ತಾಯಮ್ಮ ಹಾಗೂ ಸುಬ್ಬಮ್ಮನ ನಡುವೆ ಸಣ್ಣದಾಗಿ ಮಾತಿನ ಜಗಳ ಆರಂಭಗೊಂಡಿದೆ. ಅಷ್ಟರಲ್ಲಿ ಸುಬ್ಬಮ್ಮನ ಸೊಸೆ ದೇವಿಕಾ ಮಧ್ಯ ಪ್ರವೇಶಿಸಿ, ತಾಯಮ್ಮನ ಕಪಾಳಕ್ಕೆ ಬಾರಿಸಿದ್ದ  ಹಿನ್ನಲೆ ವಯೋವೃದ್ಧ ಮಹಿಳೆ ತಾಯಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಿಳಿಗೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೈಸೂರಿನ ಕೆ.ಆರ್‌. ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆರೋಪಿಗಳಾದ ಸುಬ್ಬಮ್ಮ(70) ಹಾಗೂ ದೇವಿಕಾಳನ್ನು(35) ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos