ಮಕ್ಕಳಿಗೆ ಅಗತ್ಯ ವಿರುವ ಕಿಟ್ ವಿತರಣೆ

ಮಕ್ಕಳಿಗೆ ಅಗತ್ಯ ವಿರುವ ಕಿಟ್ ವಿತರಣೆ

ಆನೇಕಲ್ : ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಕೋವಿಡ್ 19 ನಿಂದ ವಿದ್ಯಾರ್ಥಿಗಳು ಔಪಚಾರಿಕವಾಗಿ ಹಿನ್ನಡೆ ಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ವಿದ್ಯಾಗಮ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮನೆ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಮಕ್ಕಳು ಸೇರಿ ಸ್ವಯಂ ಕಲಿಕೆಗೆ ಆದ್ಯತೆ ನೀಡಬೇಕೆಂದು ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಐಟಿ ನಿಸರ್ಗಯಿಂದ ಅಂಜಲಿ ಧರ್ ಮತ್ತು ಸುಭೀರ ಎಂಬ ದಾನಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೃಷ್ಣದೊಡ್ಡಿ, ಹರಪನಹಳ್ಳಿ, ಕಲ್ಲುಬಾಳು ಹಾಗೂ ಮುತ್ತರಾಯನದೊಡ್ಡಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್, ರಬ್ಬರ್, ಪೆನ್ ಬರೆಯಲು ಹಾಳೆಗಳು ಹಾಗೂ ಇತರ ಸೇರಿದಂತೆ.

ಒಂದು ಕಿಟ್ ತಯಾರಿಸಿ ಬಿಇಓ ರಾಮಮೂರ್ತಿ ಹಾಗೂ ಸರ್ಕಾರಿ ನೌಕರರ ಸಂಘದ ಖಜಾಂಚಿಯಾದ ನಾಗರಾಜ್ ರವರ ನೇತೃತ್ವದಲ್ಲಿ ಎಲ್ಲಾ ಮಕ್ಕಳಿಗೂ ವಿವರಿಸಿದರು. ಶಾಲೆಯಲ್ಲಿ ಇದ್ದರು ಮನೆಯಲ್ಲಿದ್ದರು ನಿಮ್ಮ ಗುರಿ ಒಂದೇ ಆಗಿರಬೇಕು ,ಎಂದು ಓದು ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos