ಕಿಕ್-2 ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ

ಕಿಕ್-2 ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ

ಮುಂಬೈ, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನಲ್ಲಿ ಕಿಕ್-2 ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕಿಕ್-2 ಚಿತ್ರದ ತಯಾರಿಸುತ್ತಿರುವ ಸಾಜಿದ್ ನಡಿಯಾವಾಲ ಪ್ರೊಡಕ್ಷನ್ ಇಂತಹದ್ದೊಂದು ಹೇಳಿಕೆಯನ್ನು ಮಾಧ್ಯಮವೊಂದಕ್ಕೆ ನೀಡಿದ್ದು, ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಅವರಿಬ್ಬರೂ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಲು ಒಪ್ಪಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ ಕಿಕ್ 2  ಸಲ್ಮಾನ್, ದೀಪಿಕಾ ಅಭಿನಯದ ಮೊದಲ ಚಿತ್ರವಾಗಲಿದೆ.

2014 ರಲ್ಲಿ ಕಿಕ್ ಚಿತ್ರವು ಬಿಡುಗಡೆಗೊಂಡಾಗ ದೀಪಿಕಾ ಅಭಿನಯಿಸಬೇಕಿತ್ತು. ಆದರೆ ಕಾರಣಾಂತರದಿಂದ ಅಭಿನಯಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆಯ ಜಾಗಕ್ಕೆ ಜಾಕ್ವಲೀನ್ ಫರ್ನಾಂಡಿಸ್ ಅವರನ್ನು ಕರೆತರಲಾಗಿತ್ತು. ಕಿಕ್-2 ನಲ್ಲೂ ದೀಪಿಕಾ ಕೇವಲ ಸಲ್ಮಾನ್ ಖಾನ್ ಗೆ ನಾಯಕಿ ನಟಿಯಾಗಿ ಅಭಿನಯಿಸುತ್ತಿಲ್ಲ. ಬದಲಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಸಾಜಿದ್ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos