ಕಿಚ್ಚನ ನಿವಾಸಕ್ಕೆ ಆಯುಕ್ತ ಭಾಸ್ಕರ್ ರಾವ್ ಎಂಟ್ರಿ!

ಕಿಚ್ಚನ ನಿವಾಸಕ್ಕೆ ಆಯುಕ್ತ ಭಾಸ್ಕರ್ ರಾವ್ ಎಂಟ್ರಿ!

ಬೆಂಗಳೂರು , ಸೆ. 20 : ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶುಕ್ರವಾರ ಬೆಳಗ್ಗೆ ನಟ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ.
ಭಾಸ್ಕರ್ ರಾವ್ ಮತ್ತು ಕಿಚ್ಚ ಸುದೀಪ್ ಹಿಂದಿನಿಂದಲೂ ಆತ್ಮೀಯರು. ಹೀಗಾಗಿ ಸೌಹಾರ್ದಯುತವಾಗಿ ಭೇಟಿ ನೀಡಿರಬಹುದು ಎಂದು ಹೇಳಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಭಾಸ್ಕರ್ ರಾವ್ ಅವರ ಭೇಟಿ ವೇಳೆ ತೆಗೆದ ಫೋಟೋ ಸುದೀಪ್ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಇಂದು ಬೆಳಗ್ಗೆ ಕಿಚ್ಚನ ಮನೆ ಸುತ್ತಮುತ್ತ ಪೊಲೀಸ್ ಭದ್ರತೆ ತೀವ್ರವಾದ ಹಿನ್ನಲೆ ಅನೇಕರು ಏನಿರ ಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos