ಕೆಜಿಎಫ್ -2 ಆಡಿಷನ್ ಗೆ ಜನಸಾಗರ!

ಕೆಜಿಎಫ್ -2 ಆಡಿಷನ್ ಗೆ ಜನಸಾಗರ!

ಬೆಂಗಳೂರು, . 26, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮುಡಿಸಿರುವ ಚಿತ್ರ ಕೆಜಿಫ್. ಹೌದು ಕೆಜಿಎಫ್-1 ಚಿತ್ರದ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಕೆಜಿಎಫ್ -2 ಶುರುವಾಗಿದೆ. ಸರಳವಾಗಿ ಚಿತ್ರದ ಮುಹೂರ್ತ ನಡೆಸಿದ್ದ ಚಿತ್ರತಂಡ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟಕ್ಕಾಗಿ ಆಹ್ವಾನ ನೀಡಿತ್ತು. ಅದರಂತೆ ಇಂದು ನಗರದ ಮಲ್ಲೇಶ್ವರಂ ಬಳಿ ಚಿತ್ರದ ಆಡಿಷನ್ ಶುರುವಾಗಿದೆ. ರಾಜ್ಯದ ನಾನಾ ಊರುಗಳಿಂದ ಜನಸಾಗರವೇ ಹರಿದು ಬಂದಿದೆ.

ಬೆಳಗ್ಗೆಯಿಂದಲೇ ಚಿತ್ರದ ಆಡಿಷನ್ ಶುರುವಾಗಿದ್ದು, ಸಂಜೆ ಆರು ಗಂಟೆಯವರೆಗೂ ನಡೆಯಲಿದೆ. ಚಿತ್ರದ ಅವಕಾಶಕ್ಕಾಗಿ ಪ್ರತಿಭೆಗಳು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇನ್ನು ಆಡಿಷನ್ಗೆ ಭಾರೀ ಜನಸ್ತೋಮ ಆಗಮಿಸಿರುವುದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಕೂಡ ಪಡುತ್ತಿದ್ದಾರೆ. ಮಂದಿಯೂ ಕಾಣಿಸಿಕೊಳ್ಳಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos