“ಕತ್ತಲ ಕಾನು” ಕೃತಿ ಬಿಡುಗಡೆ

“ಕತ್ತಲ ಕಾನು” ಕೃತಿ ಬಿಡುಗಡೆ

ಬೆಂಗಳೂರು,ನ.25: ಎ ಶ್ರೀನಿವಾಸ್ ಪ್ರಸಾದ್ ಕಾದಂಬರಿ “ಕತ್ತಲ ಕಾನು” ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ರವರು ಇಂದಿನ ತಲೆಮಾರಿನ ಜನರಲ್ಲಿ ಓದುಗರ ಸಂಖ್ಯೆ ಕಡಿಮೆ ಯಾಗುತ್ತಿದ್ದು , ‘ಕತ್ತಲೆ ಕಾನು’ ಕೃತಿಯು ಯುವ ಜನತೆಗೆ ಆಶಾಕಿರಣವಾಗಲಿದೆ ಎಂದು ಹೇಳಿದ್ದಾರೆ. ಕುವೆಂಪು, ಕಾರಂತ, ತೇಜಸ್ವಿಯವರ ದಿಟ್ಟ ಪ್ರಭಾವ ಪ್ರಸಾದ್ ಕೃತಿಯಲ್ಲಿ ಕಾಣುತ್ತದೆ. ನಾಲ್ಕು ತಲೆಮಾರುಗಳ ಕತನವನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟು ಎಲ್ಲೇ ಹೋದರೂ ಭೂಮಿ ಗುಂಡಾಗಿಯೇ ಇರುತ್ತದೆಂಬ ನಿಲುವಿಗೆ ಕಾದಂಬರಿ ನಿಲ್ಲುತ್ತದೆ ಎಂದರು.
ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಮಂಗಟ್ಟೆ ಹಕ್ಕಿ ಪರಿಕಲ್ಪನೆಯ ವಸ್ತ್ರದ ಕುರಿತು ಬಹಳ ಸಂತಸ ವ್ಯಕ್ತಪಡಿಸಿದರು. ಸರ್ಗ ಕ್ರಿಯೇಷನ್ಸನ ಸಂಸ್ಥಾಪಕ ಸಿ. ಪಿ. ಗಿರೀಶ್ , ಕಾದಂಬರಿಗೆ ಹೋಲುವ ವಸ್ತ್ರ ವಿನ್ಯಾಸಗೊಳಿಸಿದ ಬಗೆ ಹಂಚಿಕೊಂಡರು.ಮಾದ್ಯಮ ಕ್ಷೇತ್ರದ ವಿಜಯಲಕ್ಷ್ಮೀ ಶಿಬರೂರು, ನಿರ್ದೇಶಕಿ ರಿಷಿಕ ಶರ್ಮ ಹಾಗೂ ಬೆಂಗಳೂರಿನಿಂದ ಮಣ್ಣಿಗೆ ಮರಳಿರುವ ಮುನಿರಾಜ್ ಅವರಿಗೆ ಸರ್ಗ ಕ್ರಿಯೇಷನ್ಸ್ ಪ್ರಶಸ್ತಿ ೨೦೧೯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos