ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ

ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು: “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ” – ಇದು ರಾಷ್ಟ್ರಕವಿ, ಮಹಾಕವಿ ಕುವೆಂಪು ಅವರು ರಚಿಸಿದ ಗೀತೆಯ ಮೊದಲ ಸಾಲುಗಳು. ನಾವು ಎಲ್ಲೇ ಹೋದ್ರೂ, ಎಲ್ಲೇ ಇದ್ರೂ, ಯಾವತ್ತಿಗೂ ಕೂಡ ಕನ್ನಡವನ್ನು ಬಿಟ್ಟುಕೊಡಬಾರದು ಎಂಬುದನ್ನು ಈ ಸಾಲು ಒತ್ತಿ ಹೇಳುತ್ತದೆ. ಕೇವಲ ಭಾಷೆಯಾಗದೆ ಭಾವನೆಯೂ ಆಗಿದೆ ಕನ್ನಡ.

ಕನ್ನಡ ನಮ್ಮ ಅಮ್ಮ, ಆಕೆ ನಮ್ಮ ಉಸಿರು, ಈ ಮಾತು ಕೇವಲ ಒಂದು ದಿನದ ಮಾತಾಗಬಾರದು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳನ್ನು ಪ್ರತಿ ದಿನವೂ ನೆನೆಸಿಕೊಳ್ಳಬೇಕು. ‘ನವೆಂಬರ್‌ ಕನ್ನಡಿಗರು’ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಆಗಬಾರದು ಎಂದರೆ ಇಂದಿನಿಂದಲೇ ನಮ್ಮ ಮಕ್ಕಳಿಗೆ ಕನ್ನಡದ ಕಂಪಿನ ಬಗೆಗೆ ಅರಿವು ಮೂಡಿಸಬೇಕಾಗಿದೆ. ನಮ್ಮ ಪೂರ್ವಜರು ಮತ್ತು ಕವಿಗಣ್ಯರು ಹೇಳಿದ ನಾಣ್ನುಡಿಗಳನ್ನು ಬಳಸುವ ಮೂಲಕವೇ ಸಂದೇಶ ಕಳುಹಿಸುವುದರಿಂದ ನಮ್ಮ ಕನ್ನಡದ ಕಂಪು ಮನೆ ಮನೆಗೂ ಎಲ್ಲರ ಮನಸ್ಸಿಗೂ ತಲುಪುವಂತಾಗುತ್ತದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.  ಸಿರಿಗನ್ನಡಂ ಗೆಲ್ಗೆ, ಹಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ.

ನಾವು ಇತರರ ಭಾಷೆ ಕಲಿಯುವ ಆಸಕ್ತಿಯನ್ನು, ಕನ್ನಡವನ್ನು ಇತರರಿಗೆ ಕಲಿಸುವಲ್ಲಿಯೂ ತೋರೋಣ, ಜೈ ಕನ್ನಡಾಂಬೆ

ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು,ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ಫ್ರೆಶ್ ನ್ಯೂಸ್

Latest Posts

Featured Videos