ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ: ಇನಿಯಾ

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ: ಇನಿಯಾ

ಬೆಂಗಳೂರು . 24, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರದಲ್ಲಿ ಮೊದಲ ಬಾರಿ ನಟಿಸಿರುವ ಮಾಲಿವುಡ್ ಚೆಲುವೆ ಇನಿಯಾ ಸಕತ್ ಖುಷಿಯಲ್ಲಿದ್ದಾರೆ. ತನ್ನ ಮೊದಲ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಂತಹ ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡಿರುವುದೇ ಅವರ ಸಂತಸಕ್ಕೆ ಕಾರಣ.

‘ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಾನು ಅಭಿನಯಿಸುತ್ತಿದ್ದೇನೆ. ಮೊದಲ ಅವಕಾಶದಲ್ಲಿ ಹೆಸರಾಂತ ನಟನ ಜೊತೆಗೆ ಅಭಿನಯಿಸುವ ಅವಕಾಶ ದೊರೆತದ್ದು ನನಗೆ ತುಂಬಾ ಖುಷಿ ತಂದಿದೆ.

ಇನ್ನು ಮುಂದೆ ಕನ್ನಡದಲ್ಲಿ ಇನ್ನಷ್ಟು ಅವಕಾಶ ದೊರಕಲಿದೆ ಎಂದರೆ ಅದಕ್ಕೆ ದ್ರೋಣ ಚಿತ್ರವೇ ಕಾರಣ’ ಎನ್ನುತ್ತಾರೆ ಇನಿಯಾ.

ಪ್ರಮೋದ್ ಚಕ್ರವರ್ತಿ ಅವರಂತಹ ನಿರ್ದೇಶಕರು, ಒಳ್ಳೆಯ ಪಾತ್ರ ಹಾಗೂ ಉತ್ತಮ ಟೀಂ ಜೊತೆಗೆ ನಟಿಸುವುದು ನನಗೆ ತುಂಬಾ ಖುಷಿ ತಂದಿದೆ. ಮಲಯಾಳಂನಲ್ಲಿ ಮಮ್ಮುಟ್ಟಿ, ಮೋಹನ್ ಲಾಲ್ ಅವರಂತೆ ಕನ್ನಡದಲ್ಲಿ ಶಿವರಾಜ್ ಕುಮಾರ್. ಅವರಂತ ಮೇರು ನಟರೊಂದಿಗೆ ಅಭಿನಯಿಸುವುದು ನನ್ನ ಪುಣ್ಯ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos