ಜೂನ್ 8 ಕ್ಕೆ ರಾಜ್ಯಕ್ಕೆ ‘ಮುಂಗಾರು’

ಜೂನ್ 8 ಕ್ಕೆ ರಾಜ್ಯಕ್ಕೆ ‘ಮುಂಗಾರು’

ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಈ ಬಾರಿ ರಾಜ್ಯಕ್ಕೆ ಮುಂಗಾರು ಮಾರುತವು ಜೂನ್ 8ಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮುಂಗಾರು ಮಾರುತವು ಮೇ 22 ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸಲಿದೆ ಜೂ.4ರ ವೇಳೆಗೆ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ. ನಂತರ ಕರ್ನಾಟಕ ಕರಾವಳಿಯನ್ನು ಜೂನ್ 7 ಅಥವಾ 8ರಂದು ಪ್ರವೇಶಸಲಿದೆ. ಮಾರುತವು ಪ್ರಭಲವಾಗಿದ್ದರೆ ರಾಜ್ಯದಲ್ಲಿ 8 ದಿನ ನಿರಂತರ ಮಳೆ ಸುರಿಯಲಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ದುರ್ಬಲ ಮಳೆ: ದೇಶದಾದ್ಯಂತ ವಿವಿಧ ವಲಯಗಳಲ್ಲಿ ಈ ಬಾರಿ ಆಗಲಿರುವ ಮುಂಗಾರು ಮಳೆಯ ಪ್ರಮಾಣವನ್ನು ಸ್ಕೈಮೆಟ್ ಅಂದಾಜಿಸಿದೆ. ಸಂಬಂಧಿಸಿದಂತೆ ವರದಿ ಬಿಡುಗಡೆ ಮಾಡಿದೆ. ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡು ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಲಿದೆ. ಆಂಧ್ರಪ್ರದೇಶದಲ್ಲಿ ರಾಯಲ ಸೀಮಾಶದಲ್ಲಿ ಮುಂಗಾರು ದುರ್ಬಲವಾಗಿರಲಿದೆ ಎಂದು ಸ್ಕೈ ಮೆಟ್ ಹೇಳಿದೆ.

ವಾಯುವ್ಯ ಮತ್ತು ಉತ್ತರ ಪ್ರದೇಶದ ರಾಜ್ಯಗಳಾದ ರಾಜಸ್ಥಾನ,ಪಂಜಾಬ್, ಹರಿಯಾಣ,ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡಷ ಮತ್ತು  ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿರಲಿದೆ. ದೆಹಲಿ ಸೇರಿದಂತೆ ಈ ವಲಯದಲ್ಲಿ ವಾಡಿಕೆ ಮಳೆಯಾಗಲಿದೆ. ಗುಜರಾತ,ಮಹಾರಾಷ್ಟ್ರದ ಮರಾಠ ವಾಡಾ, ವಿದರ್ಭ ಪ್ರಾಂತ್ಯಗಳಲ್ಲಿ ಹಾಗೂ ಮಧ್ಯ ಪ್ರದೇಶದ ಪಶ್ಚಿಮ ಭಾಗದಲ್ಲಿ ಮುಂಗಾರು ತೀರಾ ದುರ್ಬಲವಾಗಿರಲಿದೆ ಎಂದು ಸ್ಕೈ ಮೆಟ್ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos