ಜೂನಿಯರ್ ಜಾಕ್ಸನ್

ಏ. 13 : ಬಾಬಾ ಜಾಕ್ಸನ್ ಗೊತ್ತಲ್ವಾ… ಬಾಲಿವುಡ್ನ ಡ್ಯಾನ್ಸ್ ಕಿಂಗ್ ಹೃತಿಕ್ ರೋಷನ್ ಬಳುಕುವ ಬಳ್ಳಿಯಂತೆ ನರ್ತಿಸುತ್ತಿದ್ದ ಯುವ ಪ್ರತಿಭೆ ಯನ್ನು ನೋಡಿ ಮೂಕವಿಸ್ಮಿತರಾಗಿದ್ದರು. ಕೇವಲ ಟಿಕ್ ಟಾಕ್ ವಿಡಿಯೋ ಮೂಲಕ ಇಡೀ ಬಾಲಿವುಡ್ ಚಿತ್ರರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ಡ್ಯಾನ್ಸರ್. ಈ ಹಿಂದೆ ಥೇಟ್ ಮೈಕೆಲ್ ಜಾಕ್ಸನ್ ತರ ಸ್ಟೆಪ್ಸ್ ಹಾಕಿ ಸಿನಿರಂಗದ ತಾರೆಯರನ್ನು ನಿಬ್ಬೆರಗಾಗಿಸಿದ್ದ ಬಾಬಾ ಮತ್ತೆ ಸದ್ದು ಮಾಡಿದ್ದಾರೆ.

ಅದು ಕೂಡ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿರುವ ಗೆಂಡ ಫೂಲ್ ಹಾಡಿನೊಂದಿಗೆ ಎಂಬುದು ವಿಶೇಷ. ಹೌದು ಬಾಬಾ ಜಾಕ್ಸನ್, ಖ್ಯಾತ ರ್ಯಾಪರ್ ಬಾದ್ಷಾ ಹಾಡಿರುವ ಗೆಂಡ ಫೂಲ್ ಗೀತೆಗೆ ಕಾಲುಗಳನ್ನು ಬಳುಕಿಸಿದ್ದಾರೆ.

ತನ್ನ ಹಾಡಿಗೆ ಬಳುಕುವ ಬಳ್ಳಿಯಂತೆ ನರ್ತಿಸಿರುವ ಬಾಬಾ ಜಾಕ್ಸನ್ ಡ್ಯಾನ್ಸ್ ಸ್ಟೆಪ್ಸ್ ನೋಡಿ ಗಾಯಕ ಬಾದ್ಷಾ ಫಿದಾ ಆಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos