ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..!

ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..!

ಬೆಂಗಳೂರು: ಇತ್ತೀಚೆಗಷ್ಟೇ ನಡೆದ WPL ನಲ್ಲಿ ಆರ್ ಸಿ ಬಿ ಮಹಿಳಾ‌ ತಂಡದವರು ಕಪ್ ಗೆದ್ದಿದ್ದಾರೆ. ಈ ಬಾರಿಯ “ಐ ಪಿ ಎಲ್” ನಲ್ಲೂ ನಮ್ಮ ಆರ್ ಸಿ ಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ.

ಆರ್ ಸಿ ಬಿ ತಂಡವನ್ನು ಹುರಿದುಂಬಿಸುವ “ಜಿಂಗಲ ಜೈ” ಎಂಬ ಹಾಡನ್ನು ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ. “ಜಿಂಗಲ ಜೈ” ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಡಿದ್ದಾರೆ.ಐಪಿಎಲ್ ಸೀಸನ್ 17 ಕಿಕ್ ಸ್ಟಾರ್ಟ್ ಆಗಿದೆ. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡಗಳು ಸೆಣಸಾಡಿವೆ.

ಧ್ರುವ ಸರ್ಜಾ ಸ್ಪೋಟ್ಸ್ಟ್ ಪರ್ಸನ್. ಧ್ರುವ ಬರೀ ಜಿಮ್ ಮಾಡಿಕೊಂಡು ನಟನೆ ಮಾತ್ರ ಮಾಡಲ್ಲ. ಕ್ರಿಕೆಟ್‌ನಲ್ಲೂ ಧ್ರುವನಿಗೆ ಕ್ರೇಜ್ ಇದೆ. ಕ್ರಿಕೆಟ್ ಮ್ಯಾಚ್ ಇದ್ರೆ ಧ್ರುವ ಟಿವಿ ಮುಂದೆ ಕುಂತು ಬಿಡ್ತಾರೆ. ಹೀಗಾಗಿ ಈ ಭಾರಿ ಐಪಿಎಲ್ ಕಿಕ್ ಹೆಚ್ಚಿಸೋಕೆ ಅದ್ಧೂರಿ ಹುಡುಗ ಆರ್‌ಸಿಬಿಗಾಗಿ ಸಾಂಗ್ ಹಾಡಿದ್ದಾರೆ. ಜಿಂಗಲ ಜಿಂಗಲ ಜೈ ಆರ್‌ಸಿಬಿ ಎಂದಿದ್ದಾರೆ. ವಿಶೇಷ ಅಂದ್ರೆ ಇದು ಯೋಗರಾಜ್ ಭಟ್ ಬರೆದಿರೋ ಹಾಡು. ಧ್ರುವ ಸರ್ಜಾ ಸಿಂಗರ್ ಅಲ್ಲ. ಆದ್ರೆ ಈಗ ಧ್ರುವ ಹಾಡಿದ್ದನ್ನ ನೋಡಿದ್ರೆ ಯಾವ ಪ್ರೊಪೇಷನಲ್ ಸಿಂಗರ್‌ಗೂ ಧ್ರುವ ಕಮ್ಮಿ ಇಲ್ಲ ಅನ್ನಿಸುತ್ತೆ.

ಇದೇ ಮೊದಲ ಭಾರಿಗೆ ಧ್ರುವ ಮೈಕ್ ಮುಂದೆ ನಿಂತು ಗಾನ ಬಜಾನ ಮಾಡಿದ್ದಾರೆ. ಯೋಗರಾಬ್ ಭಟ್ರ ಲಿರಿಕ್ಸ್ ಧ್ರುವನ ವಾಯ್ಸ್ ಮಿಕ್ಸ್ ಆಗಿ ಆರ್ಸಿಬಿಯೆನ್ಸ್ಗೆ ಹೊಸ ಕಿಕ್ ಕೊಡುತ್ತಿದೆ.ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದುಕೊಟ್ಟಿದೆ. ಆದ್ರೆ ಕಳೆದ 16 ವರ್ಷದಿಂದ ಆರ್ಸಿಬಿ ಬಾಯ್ಸ್ ಟ್ರೋಫಿಗೆ ಮುತ್ತಿಟ್ಟಿಲ್ಲ. ಈ ಒಂದು ಕ್ಷಣಕ್ಕಾಗಿ ಇಡೀ ಆರ್ಸಿಬಿಯೆನ್ಸ್ ಕಾಯುತ್ತಿದ್ದಾರೆ. ಆ ಅಧ್ಬುತ ಕ್ಷಣ ಈ ಭಾರಿ ನಡೆದೇ ನಡೆಯುತ್ತೆ ಅಂತ ಆರ್ಸಿಬಿ ಅಭಿಮಾನಿ ಧ್ರುವ ಸರ್ಜಾ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos