ಝಣ ಝಣ ಕಾಂಚಾಣ ಬ್ಯಾಂಕ್ ನಿಂದ ಲೂಟಿ!

ಝಣ ಝಣ ಕಾಂಚಾಣ ಬ್ಯಾಂಕ್ ನಿಂದ ಲೂಟಿ!

 

ಬೆಂಗಳೂರು, ಜು. 5: ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣ ಡ್ರಾ ಮಾಡಿರುವ ಆರೋಪಿಗಳು ಸೆರೆ, ಬೆಂಗಳೂರಿನ ರಾಮಮೂರ್ತಿನಗರದ ಐಸಿಐಸಿಐ, ಬ್ಯಾಂಕ್ ನಿಂದ ಡ್ರಾ, ಹಣ ಬೇರೆ ಅಕೌಂಟ್ ಗೆ ತುಂಬಲು ಬಂದಾಗ ಸೆರೆ, ದೊಡ್ಡ ಜಾಲವನ್ನು ಭೇಧಿಸಿದ ಪೊಲೀಸರು.

ನಕಲಿ ಫೋನ್ ನಂಬರ್ ಬಳಸಿ 1 ಕೋಟಿ 90 ಲಕ್ಷ ಹಣ ವನ್ನು ಬ್ಯಾಂಕ್ ಗೆ ತುಂಬಲು ಬಂದಾಗ, ಕೋಟಿ ಕೋಟಿ ಹಣ ವಂಚನೆ ಮಾಡುವ ದೊಡ್ಡ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಹಣವನ್ನು ಬ್ಯಾಂಕ್ ನಲ್ಲಿ ಜಮೆ ಮಾಡಲು ಬಂದಾಗ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಈ  ಹಣದ ಮೋಸಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಂಚನೆ ಪ್ರಕರಣ ಕೂಡ ದಾಖಲಾಗಿದ್ದು, ದೊಡ್ಡ ದೊಡ್ಡ ಬಾಕ್ಸ್ ಗಳಲ್ಲಿ ನಿನ್ನೇ ಸಂಜೆ ಬ್ಯಾಂಕ್ ಗೆ ಹಣ ತಂದಾಗ, ರಾತ್ರಿ 11 ಗಂಟೆ ವರೆಗೆ ಬ್ಯಾಂಕ್ ಸಿಬ್ಬಂದಿ ಹಣ ಎಣಿಕೆ ಮಾಡಿ, ಬ್ಯಾಂಕ್ ಮ್ಯಾನೇಜರ್ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ

ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್, ಹಾಗೂ ರಂಗಸ್ವಾಮಿ ಪೊಲೀಸ್ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಈ ಮೂವರು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರಿನಲ್ಲಿ ಬಂದು ಬ್ಯಾಂಕ್ ನಲ್ಲಿ ವ್ಯವಹರಿಸುತ್ತಿದ್ದರು, ಸತತ 5 ಗಂಟೆಗಳು ಪೊಲೀಸರು ವಿಚಾರಣೆ ನಡಸಿದ್ದು, ಈ ಹಣದ ಹಿನ್ನಲೆಯೇನು ಎಂಬುದನ್ನು ಪೊಲೀಸರು ಹೆಚ್ಚೀನ ಪರಿಶೀಲನೆ ಕೈಗೆತ್ತುಕೊಂಡಿದ್ದಾರೆ. ರಾತ್ರಿ ಯಾದರೂ ಕಂತೆ ಕಂತೆ ಹಣವನ್ನು ಬ್ಯಾಂಕ್ ನ ಸಿಬ್ಬಂದಿ ಹಣ ಎಣಿಕೆ ಮಾಡುತ್ತಿರುವುದು ನೆಲಮಂಗಲ ನಾಗರಿಕರಲ್ಲಿ ಹೊಸ ಅಪರಾಧದ ಭಯ ಹುಟ್ಟಿಸಿದಂತಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos