ಡಿಎಂಕೆ ನಾಯಕ ದುರೈ ಮುರುಗನ್ ನಿವಾಸದ ಮೇಲೆ ಐಟಿ ದಾಳಿ

ಡಿಎಂಕೆ ನಾಯಕ ದುರೈ ಮುರುಗನ್ ನಿವಾಸದ ಮೇಲೆ ಐಟಿ ದಾಳಿ

ಚೆನ್ನೈ(ವೆಲ್ಲೋರ್), ಮಾ.30, ನ್ಯೂಸ್ ಎಕ್ಸ್ ಪ್ರೆಸ್:  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವ ಶಂಕೆಯ ಮೇರೆಗೆ ಶನಿವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಿರಿಯ ಡಿಎಂಕೆ ಮುಖಂಡ ದುರೈಮುರುಗನ್‌ಗೆ ಸೇರಿದ ವೆಲ್ಲೂರ್ ಜಿಲ್ಲೆಯ ಕಟ್‌ಪಾಡಿಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ನೆರೆಯ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿದ ಬಳಿಕ ಐಟಿ ಇಲಾಖೆ ಇದೀಗ ತಮಿಳುನಾಡಿನತ್ತ ಮುಖ ಮಾಡಿದೆ. ಡಿಎಂಕೆ ಖಜಾಂಚಿ ಆಗಿರುವ ಮುರುಗನ್ ಮನೆಗೆ ಶನಿವಾರ ಬೆಳಗ್ಗಿನ ಜಾವ ದಾಳಿ ಚುನಾವಣಾ ಫ್ಲೈಯಿಂಗ್ ತಂಡದೊಂದಿಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ವಂಚನೆಗೆ ಸಂಬಂಧಿಸಿದ ದಾಖಲೆಗಳಿಗಾಗಿ ಹುಡುಕಾಟ ನಡೆಸಿದರು.

ಡಿಎಂಕೆ ಪಕ್ಷ ದುರೈಮುರುಗನ್ ಪುತ್ರ ಡಿಎಂ ಕಥಿರ್ ಆನಂದ್‌ರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೆಲ್ಲೋರ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos