ಮೆಟ್ ಗಾಲಾದಲ್ಲಿ ಸಕತ್ತಾಗಿ ಮಿಂಚಿದ ಅಂಬಾನಿ ಪುತ್ರಿ ಇಶಾ ಅಂಬಾನಿ!

ಮೆಟ್ ಗಾಲಾದಲ್ಲಿ ಸಕತ್ತಾಗಿ ಮಿಂಚಿದ ಅಂಬಾನಿ ಪುತ್ರಿ ಇಶಾ ಅಂಬಾನಿ!

ನ್ಯೂಯಾರ್ಕ್, ಮೇ.8, ನ್ಯೂಸ್ ಎಕ್ಸ್ ಪ್ರೆಸ್: 2019ರ ಮೆಟ್ ಗಾಲಾ ಫ್ಯಾಷನ್ ಸಮಾರಂಭದಲ್ಲಿ ಇಶಾ ಅಂಬಾನಿ ಮಿಂಚಿದ್ರು. ಪ್ರಸಿದ್ಧ ವಿನ್ಯಾಸಕಾರ ಪ್ರಬಾಲ್ ಗುರಂಗ್ ಸಿದ್ದಪಡಿಸಿದ್ದ ತಿಳಿ ನೇರಳೆ ಬಣ್ಣದ ಬಾಲ್ ಗೌನ್ ಧರಿಸಿದ್ರು. ಡಿಸ್ನಿ ರಾಜಕುಮಾರಿ ರೀತಿಯಲ್ಲಿ ಕಂಗೊಳಿಸಿದ ಇಶಾ ಧರಿಸಿದ್ದು ಕೈಯಿಂದ ಕಸೂತಿ ಮಾಡಿದ, ಸ್ಪಟಿಕಗಳು ಮತ್ತು ಆಸ್ಟ್ರಿಚ್ ಗರಿಗಳಿಂದ ಸಿದ್ಧಗೊಂಡಿದ್ದ ಉಡುಪಿನಲ್ಲಿ. ಅಂತಿಮವಾಗಿ ಗುಲಾಬಿ ಬಣ್ಣದ ಕಾರ್ಪೆಟ್ ಮೇಲೆ ನ್ಯೂಯಾರ್ಕ್ ಮೆಟ್ ಗಾಲಾ 2019 ನಲ್ಲಿ ಹೆಜ್ಜೆ ಹಾಕಿದ್ರು. ‘ನೋಡ್ಸ್ ಆನ್ ಫ್ಯಾಷನ್ ‘-ಈ ಬಾರಿಯ ಮೆಟ್ ಗಾಲ್ ನ ಥೀಮ್ ಆಗಿತ್ತು. ಇನ್ನು ನಟಿ ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆ, ನಿಕ್ ಜೋನಾಸ್ ಇತರರು ಭಾಗವಹಿಸಿದ್ರು. ವಿನ್ಯಾಸಕಾರ ಪ್ರಬಾಲ್ ಗುರಂಗ್, ಕಳೆದ ವರ್ಷ ದೀಪಿಕಾ ಪಡುಕೋಣೆಗೆ ವಸ್ತ್ರ ವಿನ್ಯಾಸಗೊಳಿಸಿದ್ರು. ಇನ್ನು ಇಶಾ ಅಂಬಾನಿ ಧರಿಸಿದ್ದ ಉಡುಪು ಸಿದ್ಧಗೊಳ್ಳಲು 350 ಗಂಟೆಗಳ ಕಾಲ ಸಮಯ ಹಿಡಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos