ವಿದ್ಯಾಗಮ ಪುನರಾರಂಭಕ್ಕೆ ಒತ್ತಾಯ

ವಿದ್ಯಾಗಮ ಪುನರಾರಂಭಕ್ಕೆ ಒತ್ತಾಯ

ತುಮಕೂರು: ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಬಡವರು ಮತ್ತು ದಲಿತರ ಮಕ್ಕಳ ಕಲಿಕೆಗೆ ಪೂರಕವಾಗಿದ್ದ ವಿದ್ಯಾಗಮ ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಹಾಮಾರಿ ಕೊರೋನಾದಿಂದಾಗಿ ಶಾಲಾ, ಕಾಲೇಜುಗಳ ಆರಂಭವಾಗದ ಹಿನ್ನೆಲೆಯಲ್ಲಿ ಸರಕಾರ ಅನ್‌ಲೈನ್ ಶಿಕ್ಷಣದಿಂದ ವಂಚಿತರಾದ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೆ ತಂದು, ಶಿಕ್ಷಕರು ಶಾಲೆಯ ಹೊರಗೆ, ದೇವಾಲಯ, ಸಮುದಾಯಭವನ, ಮರದ ನೆರಳನಲ್ಲಿ ಆಸಕ್ತ ಮಕ್ಕಳಿಗೆ ಕಲಿಸುವ ಯೋಜನೆಯನ್ನು ಜಾರಿಗೆ ತಂದು ಬಹಳಷ್ಟು ಅನುಕೂಲ ಮಾಡಿತ್ತು.
ವಿದ್ಯಾಗಮ ಆರಂಭವಾದ ಮಕ್ಕಳನ್ನು ಶಾಲೆಗೆ ಕಳುಹಿಸಿ,ನಿಶ್ಚಿಂತೆಯಿಂದ ಕೂಲಿ,ನಾಲಿಗೆ ಹೋಗುವುದು,ದನಕರುಗಳ ಪೋಷಣೆಯಲ್ಲಿ ತೊಡಗಿದ್ದ ಪೋಷಕರಿಗೆ,ವಿದ್ಯಾಗಮದ ತಾತ್ಕಾಲಿಕ ಸ್ಥಗಿತದಿಂದ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೊಳ್ಳುವ ಜವಾಬ್ದಾರಿ ಪೋಷಕರ ಮೇಲೆ ಬಿದ್ದಿದೆ.ಕೆಲ ಶಿಕ್ಷಕರು ಸಂಘಟನೆಗಳ ಹೆಸರಿನಲ್ಲಿ ಸರಕಾರಗಳ ಮೇಲೆ ಒತ್ತಡ ತಂದು ಸದರಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೆಲಸ ಮಾಡದೆಯೇ ವೇತನ ಪಡೆಯುತ್ತಿದ್ದಾರೆ.
 

ಫ್ರೆಶ್ ನ್ಯೂಸ್

Latest Posts

Featured Videos