ಬೆಳೆ ಪರಿಹಾರಕ್ಕೆ ಒತ್ತಾಯ

ಬೆಳೆ ಪರಿಹಾರಕ್ಕೆ ಒತ್ತಾಯ

ಗದಗ : ಅತಿವೃಷ್ಠಿ ಅಥವಾ ಅನಾವೃಷ್ಟಿಯಿಂದ ಆಗುವಬೆಳೆ  ಹಾನಿಯನ್ನು ರೈತರಿಗೆ ಶೀಘ್ರವೇ ನೀಡಬೇಕೆಂದು ಒತ್ತಾಯಿಸಿ ರೈತ ಸೇನಾ ಕರ್ನಾಟಕ ಸಂಸ್ಥಾಪಕರಾದ ವಿರೇಶ ಸೊಬರದಮಠ ಸರಕಾರಕ್ಕೆ ಒತ್ತಾಯಿಸಿ, ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಆಗಷ್ಟ ತಿಂಗಳಲ್ಲಿನಲ್ಲಿ ಮಲಪ್ರಭಾ ನದಿಯ ಇತಿಹಾಸ ಕಂಡೂ ಕೇಳರಿಯದ ಭೀಕರ ಪ್ರವಾಹದಿಂದ ರೈತರು ತೀವ್ರತೊಂದರೆ ಅನುಭವಿಸಿದರು. ಸಂತ್ರಸ್ಥರಿಗೆ ಇಲ್ಲಿಯವರೆಗೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ ಈ ವರ್ಷ ಮತ್ತೆ ಅದೇ ರೀತಿಯ ಪ್ರವಾಹ ಪರಸ್ಥಿತಿ ಬರುವ ಹಂತದಲ್ಲಿದೆ ಎಂದು ಸೊಬರದಮಠ ತಿಳಿಸಿದರು.

ಪ್ರಮುಖ ಬೆಳೆಗಳಾದ ಹೆಸರು , ಹತ್ತಿ , ಗೋವಿನಜೋಳ , ಸೂರ್ಯಕಾಂತಿ ಮತ್ತು ಈರುಳ್ಳಿ ಸೇರಿದಂತೆ ಹಲವಾರು ಫಸಲುಗಳು ಅತೀವೃಷ್ಟಿಯಿಂದ ಹಾಳಾಗಿವೆ. ಆದ ಕಾರಣ ರಾಜ್ಯ ಸರಕಾರ ಪ್ರತಿ ಹೆಕ್ಟೇರ್ ಗೆ 25000 ರೂಪಾಯಿಗಳಂತೆ ಪರಿಹಾರ ಘೋಷಣೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos